ಗೋ ಮಾತೆಯ ಹೊಟ್ಟೆಯಲ್ಲಿತ್ತು ಬರೋಬ್ಬರಿ 77 ಕೆಜಿ ಪ್ಲಾಸ್ಟಿಕ್ !! | ಇನ್ನಾದರೂ ಎಚ್ಚೆತ್ತುಕೊಳ್ಳಿ ಜನತೆ, ಮಾನವನ ತಪ್ಪಿಗೆ ಮೂಕ ಪ್ರಾಣಿಗಳಿಗೇಕೆ ಶಿಕ್ಷೆ!?
ಕಠಿಣ ಕಾನೂನುಗಳ ಹೊರತಾಗಿಯೂ ದೇಶದಲ್ಲಿ ಪ್ಲಾಸ್ಟಿಕ್ ಸಮಸ್ಯೆ ವಿಪರೀತವಾಗಿದೆ. ಕಸದ ರಾಶಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಗಳು ಸಲೀಸಾಗಿ ದನ-ಕರುಗಳ ಹೊಟ್ಟೆ ಸೇರುತ್ತಿದೆ. ಹೆಚ್ಚುತ್ತಿರುವ ಪ್ಲಾಸ್ಟಿಕ್ ಹಾವಳಿ ಪ್ರಾಣಿ ಪಕ್ಷಿಗಳ ಜೀವಕ್ಕೆ ಮಾರಕವಾಗುತ್ತಿದೆ ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ.
ಗುಜರಾತಿನ ಆನಂದ್ ಜಿಲ್ಲೆಯಲ್ಲಿ ಹಸುವಿನ ಹೊಟ್ಟೆಯಲ್ಲಿ ಬರೋಬ್ಬರಿ 77 ಕೆಜಿ ಪ್ಲಾಸ್ಟಿಕ್ ಪತ್ತೆಯಾಗಿದೆ. ಪ್ಲಾಸ್ಟಿಕ್ ನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಐಸ್ ಕ್ರೀಂ ಕಪ್ ಗಳು, ಸ್ಟಿಕ್ ಗಳು ಕೂಡ ಇದರಲ್ಲಿ ಸೇರಿವೆ. ವಾರದಲ್ಲಿ ಮೂರರಿಂದ ನಾಲ್ಕು ಇಂತಹ ಪ್ರಕರಣಗಳು ವರದಿಯಾಗುತ್ತಿವೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಮುಂದಾದರೂ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುವ ಮುನ್ನ ಎಚ್ಚರ ವಹಿಸಿ. ಅವುಗಳು ಮುಗ್ಧ ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಒಡ್ಡಲಿದೆ ಎಂಬುದನ್ನು ಇನ್ನಾದರೂ ಅರಿತುಕೊಳ್ಳಿ ಎಂದು ವೈದ್ಯರು ಮನವಿ ಮಾಡಿದ್ದಾರೆ.