ಕ್ರಿಕೆಟ್ ಆಡಲು ಹೋದ ಯುವಕ ನಾಪತ್ತೆ: ದೂರು ದಾಖಲು

ಬಂಟ್ವಾಳ : ಕ್ರಿಕೆಟ್ ಆಡಲು ಹೋಗಿರುವ ಯುವಕನೋರ್ವ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿ.ಮೂಡ ಗ್ರಾಮದ ತಾಳಿಪಡ್ಡು ನಿವಾಸಿ ಮುಹಮ್ಮದ್ ಫಾರೂಕ್ ನಾಪತ್ತೆಯಾದ ಯುವಕ ಎಂದು ತಿಳಿದುಬಂದಿದೆ.

ನ.28ರಂದು ಬೆಳಗ್ಗೆ 7:30ಕ್ಕೆ ಕ್ರಿಕೆಟ್ ಆಡಲೆಂದು ಮನೆಯಿಂದ ಹೋದವರು ಅ ಬಳಿಕ ಮನೆಗೆ ವಾಪಸ್ ಬಂದಿಲ್ಲ ಎಂದು ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಿಂದ ಹೋದ ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ ‌.

Leave A Reply

Your email address will not be published.