ಗ್ರಾಹಕರಿಗೊಂದು ಗುಡ್ ನ್ಯೂಸ್ | ಇನ್ನು ಮುಂದೆ LPG ಸಿಲಿಂಡರ್ ಕೇವಲ 587 ರೂ. ಗೆ ದೊರೆಯುತ್ತದೆ !?

ದಿನದಿಂದ ದಿನಕ್ಕೆ ದಿನಸಿ ವಸ್ತುಗಳಿಂದ ಹಿಡಿದು ತೈಲಗಳ ಬೆಲೆ ವಿಪರೀತ ಏರಿಕೆ ಕಂಡು ಬರುತ್ತಿದೆ. ಮಳೆಯ ಅಬ್ಬರದಿಂದಾಗಿ ತರಕಾರಿಗಳ ಬೆಲೆಯು ಅಧಿಕವಾಗಿದೆ. ಇದರ ಜೊತೆಗೆ ಅಡುಗೆ ಅನಿಲದ ಬೆಲೆಯೂ ಉತ್ತುಂಗಕ್ಕೆ ಏರಿದ್ದು, ಆದರೆ ಇನ್ನು ಮುಂದೆ ಗ್ಯಾಸ್ ಸಿಲಿಂಡರ್ 587ರೂ.ಗೆ ಲಭ್ಯವಾಗಲಿದೆ..ಏನಿದು ಆಶ್ಚರ್ಯ ಎಂದು ಅನಿಸಿರಬೇಕಲ್ಲ? ಕಾರಣ ಇಲ್ಲಿದೆ ನೋಡಿ.

ಹೌದು. ಅಡುಗೆ ಅನಿಲ ಬೆಲೆ ಎಷ್ಟು ವಿಪರೀತವಾಗಿತ್ತು ಎಂದರೆ ಅಡುಗೆ ಮಾಡಿ ಉಣಲು ಕಷ್ಟ ಎಂಬ ಪರಿಸ್ಥಿತಿಗೆ ದೂಡಿತ್ತು. ಗ್ಯಾಸ್ ಬೆಲೆ 900 ರೂ.ಗೆ ಏರಿಕೆಯಾಗಿದ್ದು,ಸಿಲಿಂಡರ್ ಖರೀದಿಸುವುದು ಜನ ಸಾಮಾನ್ಯರಿಗೆ ಹೊರೆಯಾಗಿದೆ.ಇನ್ನು ಕೆಲ ದಿನಗಳಿಂದ ಸರ್ಕಾರ ನೀಡುವ ಗ್ಯಾಸ್ ಸಬ್ಸಿಡಿ ಬಾರದೇ ಇದ್ದದ್ದು, ಮತ್ತಷ್ಟು ಹೊರೆಯಾಗಿತ್ತು. ಆದ್ರೆ, ಈಗ ನೀವು ಸಬ್ಸಿಡಿ ಬಗ್ಗೆ ಚಿಂತಿಸಬೇಕಾಗಿಲ್ಲ. ಯಾಕಂದ್ರೆ, ಕೇಂದ್ರ ಸರ್ಕಾರ ಗ್ಯಾಸ್ ಸಬ್ಸಿಡಿ ಪುನಶ್ಚೇತನಕ್ಕೆ ಚಿಂತನೆ ನಡೆಸಿದೆ.

ಸಬ್ಸಿಡಿ ನಿಟ್ಟಿನಲ್ಲಿ ಹಣಕಾಸು ಸಚಿವಾಲಯದಿಂದಲೂ ಪ್ರಸ್ತಾವನೆಗಳು ಬಂದಿದ್ದು,ಅದ್ರಂತೆ,ಪರಿಗಣನೆಯಲ್ಲಿರುವ ಮಾಹಿತಿ ಪ್ರಕಾರ, ಸದ್ಯ ಪ್ರಸ್ತುತ ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ ದೇಶೀಯ ಅನಿಲಕ್ಕೆ ಸಬ್ಸಿಡಿ ನೀಡಲಾಗುತ್ತದೆ ಜೊತೆಗೆ ಇಡೀ ದೇಶಕ್ಕೆ ಗ್ಯಾಸ್ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.ತೈಲ ಮಾರುಕಟ್ಟೆ ಕಂಪನಿಗಳು ಕೇಂದ್ರ ಸರ್ಕಾರದ ನಿರ್ದೇಶನದಂತೆ ಗ್ಯಾಸ್ ಡೀಲರ್‌ಗಳಿಗೆ 303 ರೂ.ಸಬ್ಸಿಡಿ ನೀಡುತ್ತವೆ. ಇದರೊಂದಿಗೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 303 ರೂ.ಗಳ ರಿಯಾಯಿತಿ ನೀಡಲಿದ್ದು,ಈ ಮೂಲಕ ಈಗ 900 ರೂಪಾಯಿಯ ಗ್ಯಾಸ್ ಸಿಲಿಂಡರ್‌ಗೆ 587 ರೂಪಾಯಿಗೆ ಲಭ್ಯವಿರುತ್ತದೆ.

ಸಬ್ಸಿಡಿ ಪಡೆಯುವುದು ಹೇಗೆ??

ನಿಮ್ಮ ಗ್ಯಾಸ್ ಸಂಪರ್ಕದೊಂದಿಗೆ ನಿಮ್ಮ ಆಧಾರ್ ಸಂಖ್ಯೆಯನ್ನ ಲಿಂಕ್ ಮಾಡಿ. ಆಧಾರ್ ಲಿಂಕ್ ಮಾಡಿದ ನಂತ್ರ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಬ್ಸಿಡಿ ಮೊತ್ತವನ್ನ ನೀವು ಪಡೆಯುತ್ತೀರಿ. ಇದರೊಂದಿಗೆ ನಗದು ಠೇವಣಿ ಮಾಹಿತಿಯ ಬಗ್ಗೆ ನಿಮ್ಗೆ ಸಂದೇಶವೂ ಬರುತ್ತದೆ.ನಿಮ್ಮ ಗ್ಯಾಸ್ ಸಂಪರ್ಕವನ್ನು ಮೊಬೈಲ್‌ನೊಂದಿಗೆ ಲಿಂಕ್ ಮಾಡಲು , ನಿಮ್ಮ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ನಿಮಗೆ ಮೊಬೈಲ್‌ನೊಂದಿಗೆ ಗ್ಯಾಸ್ ಸಂಪರ್ಕವನ್ನ ಲಿಂಕ್ ಮಾಡುವ ಆಯ್ಕೆಯನ್ನು ಕಾಣಬಹುದು. ಅದರ ನಂತರ ನಿಮ್ಮ 17 ಅಂಕಿಗಳ LPG ID ಅನ್ನು ನಮೂದಿಸಿ.ಆಮೇಲೆ ಪರಿಶೀಲಿಸಿ ಮತ್ತು ಸಲ್ಲಿಸಿ ಕ್ಲಿಕ್‌ ಮಾಡಿ. ಬುಕಿಂಗ್ ದಿನಾಂಕ ಸೇರಿದಂತೆ ಎಲ್ಲಾ ಇತರ ಮಾಹಿತಿಯನ್ನ ಭರ್ತಿ ಮಾಡಬೇಕು. ಇದರ ನಂತರ ನೀವು ಸಬ್ಸಿಡಿಗೆ ಸಂಬಂಧಿಸಿದ ಮಾಹಿತಿಯನ್ನ ಪಡೆಯಬಹುದು.

ಗ್ರಾಹಕ ಸಂಖ್ಯೆ 1800-233-3555 ಗೆ ಕರೆ ಮಾಡುವ ಮೂಲಕ ಎಲ್ ಪಿಜಿ ಸಬ್ಸಿಡಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.

Leave A Reply

Your email address will not be published.