ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಡೆಯಿಂದ ಸಿಹಿ ಸುದ್ದಿ | ಪೆಟ್ರೋಲ್ ಬೆಲೆ ಏರಿಕೆ ನಡುವೆ ಗ್ರಾಹಕರಿಗೆ ದೊರೆಯಲಿದೆ ಭರ್ಜರಿ ಗಿಫ್ಟ್ ವೋಚರ್!!

ನವದೆಹಲಿ: ಪೆಟ್ರೋಲ್ ಬೆಲೆ ಉತ್ತುಂಗಕ್ಕೆ ಏರುತ್ತಿದ್ದಂತೆ,ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಉಡುಗೊರೆಯನ್ನು ನೀಡಲು ಸಿದ್ಧಪಡಿಸಿದೆ.ಆದರೆ ಇವರ ಈ ನಿರ್ಧಾರ ಕೆಲವು ಜನರನ್ನು ಕೋಪಕ್ಕೆ ದುಡಿದಂತೂ ಸುಳ್ಳಲ್ಲ. ಅಷ್ಟಕ್ಕೂ ಈ ಆಫರ್ ಏನೆಂದು ನೀವೇ ನೋಡಿ.

ಇದೊಂದು ಉಡುಗೊರೆ ರೂಪದಲ್ಲಿ ನೀಡಬಲ್ಲ ‘ಒನ್‌ ಫಾರ್‌ ಯು’ ಎಂಬ ಇ-ವೋಚರ್‌ ಆಗಿದ್ದು, ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದೆ. ಈ ಕುರಿತಂತೆ ಟ್ವಿಟರ್‌ನಲ್ಲಿ ಸಂಸ್ಥೆ ಪ್ರಕಟಣೆ ನೀಡಿದ್ದು, ಮದುವೆ ಮುಂತಾದ ಸಮಾರಂಭಗಳಲ್ಲಿ ಖಂಡಿತವಾಗಿಯೂ ಉಪಯೋಗಕ್ಕೆ ಬರುವಂಥ ಉಡುಗೊರೆಯಿದು ಎಂದು ಬಣ್ಣಿಸಿದೆ.ಇದೊಂದು ಇಲೆಕ್ಟ್ರಿಕ್‌ ವೋಚರ್‌ (ಇ-ವೋಚರ್‌) ಆಗಿದ್ದು, ಕಾರ್ಡ್‌ ರೂಪದಲ್ಲಿ ಇರುತ್ತದೆ. ಇದನ್ನು ಆನ್‌ಲೈನ್‌ ಮೂಲಕ ಖರೀದಿಸಬಹುದು. ಇದರ ಮುಖಬೆಲೆ ಕನಿಷ್ಠ 500 ರೂ.ಗಳಿಂದ ಗರಿಷ್ಠ 10,000 ರೂ.ವರೆಗೆ ಇರುತ್ತದೆ ಎಂದು ತಿಳಿಸಿದೆ.

ಆದರೆ ದುಬಾರಿ ಪೆಟ್ರೋಲ್, ಡೀಸೆಲ್ ಗಳ ಬೆಲೆಯ ನಡುವೆ ಇಂತಹ ವೋಚರ್ ನೀಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.ಐಒಸಿಯಿಂದ ಟ್ವಿಟರ್‌ನಲ್ಲಿ ಇ-ವೋಚರ್‌ ಬಗ್ಗೆ ಪ್ರಕಟಣೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬರಲಾರಂಭಿಸಿದೆ. ಅಲೀಮ್‌ ಎಂಬುವರು, ‘ಇಲ್ಲಿ ಜನಸಾಮಾನ್ಯರು ತೈಲ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವಾಗ ನೀವು ಇ-ವೋಚರ್‌ ಹೆಸರಿನಲ್ಲಿ ಮಜಾ ಮಾಡುತ್ತಿದ್ದೀರಿ ಅಲ್ಲವೇ?’ಎಂದು ಕೇಳಿದ್ದಾರೆ. ಕಾರ್ತಿಕೇಯನ್‌ ಎಂಬವರು, ‘ತೈಲಗಳ ಮೇಲೆ ಸಿಕ್ಕಾಪಟ್ಟೆ ತೆರಿಗೆ ಹೇರಿರುವಂಥ ಇಂಥ ಸಂದರ್ಭದಲ್ಲಿ ಈ ವೋಚರ್‌ ಅವಶ್ಯಕತೆಯಿತ್ತಾ?’ಎಂದಿದ್ದಾರೆ. ವನಿಕಾ ಅರೋರಾ ಎಂಬುವರು ಟ್ವೀಟ್‌ ಮಾಡಿ, ‘ಚಿನ್ನದ ದರ ಕೊಟ್ಟು ಪೆಟ್ರೋಲ್‌, ಡೀಸೆಲ್‌ ಇ-ವೋಚರ್‌ ಕೊಳ್ಳುವಂತಾಗಿದೆ ‘ಎಂದು ಲೇವಡಿ ಮಾಡಿದ್ದಾರೆ.

ಹೀಗೆ, ಹಲವಾರು ಮಂದಿ ಟೀಕೆ ವ್ಯಕ್ತಪಡಿಸಿದ್ದು, ಅಂತೂ ಆಫರ್ ಜನರಿಗೆ ಆಫರ್ ನೀಡುತ್ತೋ!? ಸಂಕಟ ಕೊಡುತ್ತೋ? ಕಾದು ನೋಡಬೇಕಷ್ಟೆ. ವೋಚರ್ ನೆಪದಲ್ಲಿ ಹಣಗಳಿಸುವ ಪ್ರಯತ್ನದ ಜೊತೆ ತೈಲ ಬೆಲೆ ಏರಿಕೆ ಕಾಣುವುದಂತೂ ಖಚಿತ!!

Leave A Reply

Your email address will not be published.