ಮನೆಗೆ ಹೋಗಲು ಅಂಬ್ಯುಲೆನ್ಗೆ ಕರೆ ಮಾಡುತ್ತಿದ್ದ ಭೂಪ ,ಈತ 39 ಬಾರಿ ಅಂಬ್ಯುಲೆನ್ಸ್ ಮೂಲಕ ಮನೆಗೆ ಹೋಗಿದ್ದ
ತೈವಾನ್ : ಪ್ರಪಂಚದಲ್ಲಿ ಎಂತೆಂಥ ಜಿಪುಣರು ಇರುತ್ತಾರೆ ಅಂತಾ ಕೇಳಿದ್ರೆ ಆಶ್ಚರ್ಯವಾಗುತ್ತದೆ. ಇಲ್ಲೊಬ್ಬ ಸೂಪರ್ ಮಾರ್ಕೆಟ್ನಿಂದ ಮನೆಗೆ ನಡೆಯುತ್ತಾ ಹೋಗಬೇಕಲ್ಲಾ ಎಂದು ಉದಾಸೀನ ತೋರಿದವ ಈ ರೀತಿ ಮಾಡಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ..ಆತ ಮಾಡಿದ್ದದಾದರೂ ಏನಂದು ನಿಮಗೆ ಗೊತ್ತಾ?
ತೈವಾನ್ನ ವ್ಯಕ್ತಿಯೊಬ್ಬ ಸೂಪರ್ ಮಾರ್ಕೆಟ್ ನಿಂದ ಮನೆಗೆ ಹೋಗಲು ಅನಾರೋಗ್ಯ ಪೀಡಿತನಂತೆ ವರ್ತಿಸಿ, ಆಂಬುಲೆನ್ಸ್ಗೆ ಕರೆ ಮಾಡುತ್ತಿದ್ದ.
ಲಾಕ್ಡೌನ್ ಕುರಿತು ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ- ಡಾ.ಸುಧಾಕರ್
ಆಸ್ಪತ್ರೆಯ ಪಕ್ಕದಲ್ಲೇ ಆತನ ಮನೆ ಇರುವುದರಿಂದ ಆಂಬುಲೆನ್ಸ್ನ್ನು ಮನೆಗೆ ಹೋಗಲು ಉಚಿತ ಟ್ಯಾಕ್ಸಿಯಂತೆ ಬಳಕೆ ಮಾಡಿದ್ದಾನೆ. ಹಾಗಂತ ಸೂಪರ್ ಮಾರ್ಕೆಟ್ನಿಂದ ಕೇವಲ 200 ಮೀ ದೂರದಲ್ಲಿ ಈತನ ಮನೆಯಿದೆ.
ಆಸ್ಪತ್ರೆಗೆ ಕರೆತಂದ ತಕ್ಷಣ ತನಗೆ ಏನೂ ಆಗಿಲ್ಲ ಎಂಬಂತೆ ನಡೆದುಕೊಂಡು ಹೋಗಿದ್ದಾನೆ. ಇದರಿಂದ ಅನುಮಾನಗೊಂಡ ಆಸ್ಪತ್ರೆಯ ಸಿಬ್ಬಂದಿ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದಾಗ ವರ್ಷದಲ್ಲಿ 39 ಬಾರಿ ಅನಾರೋಗ್ಯ ಪೀಡಿತನಂತೆ ವರ್ತಿಸಿ ಆಂಬುಲೆನ್ಸ್ ಬಳಸಿರುವುದು ತಿಳಿದು ಬಂದಿದೆ.