ಹಗ್ಗ ಬಿಸಾಡಿದಂತೆ ಸಲೀಸಾಗಿ ಹಾವನ್ನು ಎತ್ತಿ ಎತ್ತಿ ಬಿಸಾಡುತ್ತಾನೆ ಈ ವ್ಯಕ್ತಿ !! | ಮೈ ಜುಮ್ ಎನ್ನುವ ಈ ವೀಡಿಯೋ ಇಲ್ಲಿದೆ ನೋಡಿ

ಅದೆಷ್ಟೋ ಮಂದಿ ಕನಸಲ್ಲೂ ಹಾವು ಕಂಡರೆ ಒಮ್ಮೆಗೆ ಬೆಚ್ಚಿ ಬೀಳುತ್ತಾರೆ.ಸುಮ್ಮನೆ ತಮಾಷೆಗೆ ಹಾವಿನ ರೀತಿಲಿ ಏನಾದರೂ ಎಸೆದರೂ ಸಾಕು ಅದೇ ಭಯ ಸುಮಾರು ತಾಸಿನವರೆಗೂ ಇರುತ್ತದೆ. ಆದ್ರೆ ಇಲ್ಲೊಬ್ಬನ ಹಾವಿನ ಜೊತೆಗಿನ ಸಾಹಸದ ವಿಡಿಯೋ ನೀವು ನೋಡಲೇ ಬೇಕು.

ಇವಾಗ ಅಂತೂ ಮನೋರಂಜನೆಗೆ ಕಡಿಮೆ ಇಲ್ಲ ಬಿಡಿ. ಇನ್ಸ್ಟಾಗ್ರಾಮ್, ಫೇಸ್ಬುಕ್ ಹೀಗೆ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ಮನಸ್ ಪೂರ್ತಿ ನಗಿಸುವ ವಿಡಿಯೋಗಳು ಇದ್ದರೆ, ಕೆಲವು ಕಣ್ಣಲ್ಲಿ ನೀರು ತರಿಸುವಂತಿದೆ. ಆದ್ರೆ ಈ ವಿಡಿಯೋ ಭಯಾನಕವಾಗಿದೆ ಎಂದರೆ ತಪ್ಪಾಗಲ್ಲ ಬಿಡಿ.ಹೌದು.ಇಲ್ಲೊಬ್ಬ ವ್ಯಕ್ತಿ ಹಗ್ಗವನ್ನು ಎತ್ತಿ ಬಿಸಾಡುವಂತೆ ಹಿಂಡು ಹಾವುಗಳನ್ನು ಹಿಡಿದು ಎಸೆಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸರ್ಪವನ್ನು ಕಂಡರೆ ಸೈನ್ಯವೂ ನಡುಗುತ್ತದೆ ಎಂಬ ಮಾತಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಇಲ್ಲೊಬ್ಬ ವ್ಯಕ್ತಿ ಒಂದಲ್ಲಾ, ಎರಡಲ್ಲಾ, ಮೂರಲ್ಲಾ ಹಾವಿನ ಸೈನ್ಯವನ್ನು ಸಣ್ಣ ಹುಳಗಳಂತೆ ಎತ್ತಿ ಕಾಡಿಗೆ ಬಿಸಾಡುತ್ತಿದ್ದಾನೆ. ಸದ್ಯ ಅಂತರ್ಜಾಲದಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.ವಾಸ್ತವವಾಗಿ ಈ ದೃಶ್ಯವನ್ನು ನೋಡಿದರೆ ಜನರು ಓಡಾಡುವ ರಸ್ತೆಯ ಬದಿಯಲ್ಲಿ ಹಾವುಗಳು ಇದ್ದಂತೆ ತೋರುತ್ತದೆ. ರಸ್ತೆಯ ಬಳಿ ದಟ್ಟವಾದ ಕಾಡನ್ನೂ ನೋಡಬಹುದು. ಲೆಕ್ಕವಿಲ್ಲದಷ್ಟು ಹಾವುಗಳು ಆ ಕಾಡಿನಿಂದ ರಸ್ತೆಗೆ ಬರಲು ಯತ್ನಿಸುತ್ತಿವೆ. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ರಸ್ತೆಗೆ ನುಗ್ಗುವ ಹಾವುಗಳನ್ನು ಒಂದೊಂದಾಗಿ ಮತ್ತೆ ಪೊದೆಗೆ ಎಸೆಯುತ್ತಾನೆ.ಅಂತೂ ಆತನ ಈ ಸಾಹಸ ನೋಡುಗರನ್ನು ಬೆಚ್ಚಿ ಬೀಳಿಸುವುದಲ್ಲದೆ, ಆತನ ಧೈರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.

Leave A Reply