ದಕ್ಷಿಣ ಕನ್ನಡ ಕರ್ನಾಟಕದಲ್ಲೇ ನಾಲ್ಕನೆಯ ಶ್ರೀಮಂತ ಜಿಲ್ಲೆ | ದೇಶದಲ್ಲಿ ಯಾವ ರಾಜ್ಯ ಅತಿ ಶ್ರೀಮಂತ ಗೊತ್ತಾ ?!

ನವದೆಹಲಿ: ಭಾರತದ ಬಡ ಮತ್ತು ಶ್ರೀಮಂತ ರಾಜ್ಯಗಳ ಜಿಲ್ಲೆಗಳ ಮತ್ತು ನಗರಗಳ ಪಟ್ಟಿ ಬಿಡುಗಡೆಯಾಗಿದೆ.
ಭಾರತದಲ್ಲಿ ಕರ್ನಾಟಕ 19ನೇ ಸ್ಥಾನವನ್ನು ಪಡೆದಿದೆ.

Ad Widget

Ad Widget . . Ad Widget . Ad Widget . Ad Widget

Ad Widget

ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ನಗರವು ಮೊದಲ ಶ್ರೀಮಂತ ಜಿಲ್ಲೆಯಾಗಿದ್ದು, ದಕ್ಷಿಣಕನ್ನಡ ನಾಲ್ಕನೆಯ ಸ್ಥಾನ ಪಡೆದುಕೊಂಡಿದೆ. ಉಡುಪಿ ಮತ್ತು ಚಿಕ್ಕಮಗಳೂರು ಸಲ ಹನ್ನೊಂದನೆಯ ಮತ್ತು 12ನೇಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

Ad Widget
Ad Widget Ad Widget

ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಭಾರತದಲ್ಲೇ ಅತಿ ಬಡವರನ್ನು ಹೊಂದಿರುವ ರಾಜ್ಯವಾಗಿದೆ.

ಅತ್ಯಂತ ಶ್ರೀಮಂತ ರಾಜ್ಯ ಕೇರಳವಾಗಿದ್ದು,
ಕರ್ನಾಟಕದ 19 ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಜನಸಂಖ್ಯೆಯಲ್ಲಿ 13.16% ರಷ್ಟು ಬಡವರಿದ್ದಾರೆ.

ಕರ್ನಾಟಕದ ಜಿಲ್ಲೆಗಳಲ್ಲಿ ಯಾದಗಿರಿ ಅತಿ ಹೆಚ್ಚು ಬಡವರನ್ನು ಹೊಂದಿರುವ ಜಿಲ್ಲೆ ಎಂಬ ಹಣೆಪಟ್ಟಿಗೆ ಭಾಜನವಾಗಿದೆ.ನಂತರದ ಸ್ಥಾನಗಳಲ್ಲಿ ರಾಯಚೂರು, ಕೊಪ್ಪಳ , ಬಳ್ಳಾರಿ , ವಿಜಯಪುರ ಹಾಗೂ ಕಲಬುರಗಿ ಇವೆ. ಹಾಗೆಯೇ ಶ್ರೀಮಂತ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದ್ದರೇ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.

ಈ ಪಟ್ಟಿಗಮನಿಸಿದಾಗ ಹಿಂದೆ ಹೈದರಾಬಾದ್‌ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ‘ಕಲ್ಯಾಣ ಕರ್ನಾಟಕ’ದ ಜಿಲ್ಲೆಗಳು ಹಾಗೂ ಮುಂಬೈ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ‘ಕಿತ್ತೂರು ಕರ್ನಾಟಕ’ದ ಬಹುತೇಕ ಜಿಲ್ಲೆಗಳು ತೀರಾ ಹಿಂದುಳಿದಿವೆ ಎಂಬುದು ಸಾಬೀತಾಗಿದೆ.

ಸೂಚ್ಯಂಕ ಪಟ್ಟಿಯಲ್ಲಿ ಬಿಹಾರ ಮೊದಲ ಸ್ಥಾನ ಪಡೆದಿದೆ. ಇಲ್ಲಿನ ಜನಸಂಖ್ಯೆಯಲ್ಲಿ 51.91% ಬಡವರಿದ್ದಾರೆ. ನಂತರದ ಸ್ಥಾನಗಳನ್ನು ಪಡೆದ ಜಾರ್ಖಂಡ್ 42.16%, ಉತ್ತರ ಪ್ರದೇಶ 37.79%, ಮಧ್ಯಪ್ರದೇಶ 36.65% ಹಾಗೂ ಮೇಘಾಲಯದಲ್ಲಿ 32.67% ಬಡವರನ್ನು ಹೊಂದಿದೆ.ಕೇರಳ ರಾಜ್ಯ ಅತಿ ಕಡಿಮೆ ಬಡವರನ್ನು ಹೊಂದಿರುವ ಪಟ್ಟಿಗೆ ಸೇರಿದೆ. ಕೇರಳದ ಒಟ್ಟು ಜನಸಂಖ್ಯೆಯಲ್ಲಿ 0.71ರಷ್ಟು ಮಾತ್ರ ಬಡವರಿದ್ದಾರೆ. ನಂತರದ ಸ್ಥಾನಗಳನ್ನು ಗೋವಾ (3.76%), ಸಿಕ್ಕಿಂ(3.82%), ತಮಿಳುನಾಡು(4.89%), ಹಾಗೂ ಪಂಜಾಬ್ (5.59%) ಪಡೆದುಕೊಂಡಿದೆ.

ಸೂಚ್ಯಂಕದ ಮಾನದಂಡ:

ಜಾಗತಿಕ ಮನ್ನಣೆ ಪಡೆದ ಆಕ್ಸ್‌ಫರ್ಡ್‌ ಬಡತನ ಹಾಗೂ ಮಾನವ ಅಭಿವೃದ್ಧಿ ಉಪಕ್ರಮ ಹಾಗೂ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯ ಸಮೀಕ್ಷಾ ಮಾನದಂಡಗಳನ್ನು ಆಧರಿಸಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ ಎಂದು ನೀತಿ ಆಯೋಗ ಹೇಳಿದೆ. ಆರೋಗ್ಯ, ಶಿಕ್ಷಣ ಹಾಗೂ ಜೀವನ ಗುಣಮಟ್ಟ- ಎಂಬ 3 ಮಾನದಂಡ ಆಧರಿಸಿ ಬಡತನ ಅಳೆಯಲಾಗಿದೆ. ಇವುಗಳಲ್ಲಿ ಪೌಷ್ಟಿಕತೆ, ಶಿಶುಮರಣ, ಶಾಲೆಗೆ ಮಕ್ಕಳ ಹೋಗುವಿಕೆ, ಅಡುಗೆಗೆ ಬಳಸುವ ಇಂಧನ, ನೈರ್ಮಲ್ಯ, ಕುಡಿವ ನೀರು, ಮನೆ, ವಿದ್ಯುತ್,ಬ್ಯಾಂಕ್‌ ಖಾತೆ ಇತ್ಯಾದಿ ವಿಷಯಗಳ ತುಲನಾತ್ಮಕ ಅಧ್ಯಯನದ ಮೇಲೆ ಈ ಸರ್ವೇ ನಡೆದಿದೆ.

Leave a Reply

error: Content is protected !!
Scroll to Top
%d bloggers like this: