ಸಂವಿಧಾನದ ಥೀಮ್ ನಲ್ಲಿ ತಯಾರಾಗಿದೆ ವೆಡ್ಡಿಂಗ್ ಕಾರ್ಡ್ | ಸಂವಿಧಾನದ 21 ನೆಯ ವಿಧಿಯ ಅಡಿಯಲ್ಲಿ ಮದುವೆಯೆಂಬ ಮೂಲಭೂತವಾದ ಹಕ್ಕನ್ನು…..ಹೀಗೆ ಸಾಗುತ್ತದೆ ವೈರಲ್ ಆದ ಇನ್ವಿಟೇಶನ್ ಕಾರ್ಡ್

0 7

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ,ಜೀವನ ಪರಿಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ.ಹೀಗಾಗಿ ಜೋಡಿಗಳು ಎಲ್ಲಾ ರೀತಿಯ ಪ್ಲಾನ್ ಗಳನ್ನು ಮುಂಚಿತವಾಗಿ ಮಾಡುತ್ತಾರೆ. ಕೆಲವರಿಗೆ ಬಂದ ಅತಿಥಿಗಳಿಗೆ ಯಾವ ರೀತಿ ಉಪಚಾರ ನೀಡುವುದು ಎಂದಾದರೆ, ಇನ್ನೂ ಕೆಲವರಿಗೆ ತಮ್ಮ ಮದುವೆಯ ಡ್ರೆಸ್ಸಿಂಗ್, ಫೋಟೋಗ್ರಾಫರ್ ಬಗ್ಗೆ ಚಿಂತೆ.ಇವಾಗ ಅಂತೂ ಪ್ರಿ ವೆಡ್ಡಿಂಗ್ ಫೋಟೋ ಶೂಟ್, ಹಳದಿ, ಮೆಹಂದಿ ಹೀಗೆಲ್ಲ ವೆರೈಟಿ ಪ್ಲಾನಿಂಗ್ ಇದೆ.ಆದರೆ ಸಾಮಾನ್ಯವಾಗಿ ಯಾವುದೇ ಗಂಡು-ಹೆಣ್ಣು ಮದುವೆ ಕಾರ್ಡ್ ಬಗ್ಗೆ ಅಷ್ಟೊಂದು ಯೋಚಿಸುವುದಿಲ್ಲ. ಸಿಂಪಲ್ ಆಗಿ ಮಾಡಿ ಸ್ನೇಹಿತರಿಗೆ, ಫ್ಯಾಮಿಲಿ ಗೆ ಹಂಚುತ್ತಾರೆ. ಆದರೆ ಇಲ್ಲೊಬ್ಬ ತನ್ನ ಮದುವೆಗಾಗಿ ನೀಡುವ ಆಮಂತ್ರಣದಲ್ಲೂ ವಿಭಿನ್ನತೆಗೆ ಹೆಚ್ಚು ಒತ್ತು ನೀಡಿದ್ದು ವಿಶೇಷವೇ ಸರಿ.

ಹೌದು. ಈತ ಹೊಸ ವಿಶಿಷ್ಟದೊಂದಿಗೆ ʻಸಂವಿಧಾನ ಥೀಮ್ʼ ನೊಂದಿಗೆ ಮಾಡಿರುವ ವೆಡ್ಡಿಂಗ್ ಕಾರ್ಡ್ ವೊಂದು ಎಲ್ಲರ ಗಮನಸೆಳೆದಿದೆ. ಹೇಳಿ ಕೇಳಿ ಇವರು ವಕೀಲರು. ತಮ್ಮ ವೃತ್ತಿಯ ಅನುಭವದ ಮೇರೆಗೆ ಇವರ ಈ ಯೋಚನೆ ತಪ್ಪಲ್ಲ ಬಿಡಿ.ತಮ್ಮ ಮದುವೆ ಕರೆಯೋಲೆಯನ್ನು ಸಂವಿಧಾನದ ಥೀಮ್​ನೊಂದಿಗೆ ಸಿದ್ಧಪಡಿಸಿದ ಇವರು ಈ ವೆಡ್ಡಿಂಗ್ ಕಾರ್ಡ್ ದೇಶದೆಲ್ಲೆಡೆ ಭಾರಿ ವೈರಲ್‌ ಆಗುವಂತೆ ಮಾಡಿದ್ದಾರೆ.ಇವರು ಅಸ್ಸಾಂನ ಗುವಾಹಟಿಯ ವಕೀಲರಾಗಿದ್ದು,ಹರಿದ್ವಾರದಲ್ಲಿ ಸಹಾಯಕ ಪ್ರಾಧ್ಯಾಪಕಿ ವೃತ್ತಿಯಲ್ಲಿರುವ ಪೂಜಾ ಶರ್ಮಾ ಅವರನ್ನು ವಿವಾಹವಾಗುತ್ತಿದ್ದಾರೆ. ಹಾಗಾಗಿ ವಿಶೇಷವಾಗಿ ಆಮಂತ್ರಣ ನೀಡಬೇಕೆಂದು ವಕೀಲ ಅಜಯ್ ಶರ್ಮಾ ಅವರು ತಮ್ಮ ಮದುವೆಯ ಕರೆಯೋಲೆಯನ್ನು ಸಂವಿಧಾನದ ಥೀಮ್ ​ನೊಂದಿಗೆ ತಯಾರಿಸಿ ಗಮನ ಸೆಳೆದಿದ್ದಾರೆ.

ಈ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು,ಸಮಾನತೆಯನ್ನು ಪ್ರತಿನಿಧಿಸಲು ನ್ಯಾಯದ ತಕ್ಕಡಿಯ ಎರಡೂ ಬದಿಯಲ್ಲಿ ವಧು ವರರ ಹೆಸರನ್ನು ಬರೆಯಲಾಗಿದೆ. ಮದುವೆಯ ಆಮಂತ್ರಣವು ಭಾರತೀಯ ಕಾನೂನು ಮತ್ತು ಹಕ್ಕುಗಳನ್ನು ಉಲ್ಲೇಖಿಸುತ್ತದೆ. ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಬುದುಕುವ ಹಕ್ಕಿನ ಅಡಿಯಲ್ಲಿ ಮದುವೆಯಾಗುವ ಹಕ್ಕು ಇದೆ. ಹಾಗಾಗಿ 2021 ನವೆಂಬರ್ 28 ಭಾನುವಾರದಂದು ನಾನು ಈ ಮೂಲಭೂತ ಹಕ್ಕನ್ನು ಬಳಸುವ ಸಮಯವಾಗಿದೆ ಎಂದು ವೆಡ್ಡಿಂಗ್ ಕಾರ್ಡ್​ನಲ್ಲಿ ಹೇಳಿರುವುದು ಎಲ್ಲಾರನ್ನು ಆಕರ್ಷಿಸಿದೆ.

ಅಜಯ್ ಅವರು ಐದು ವರ್ಷಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಾ ಈ ಹೊಸ ಶೈಲಿಯಲ್ಲಿ ವೆಡ್ಡಿಂಗ್ ಕಾರ್ಡ್ ತಯಾರಿಸುವ ಯೋಜನೆ ಹೊಳೆಯಿತ್ತು ಎಂದು ಹೇಳಿಕೊಂಡಿದ್ದಾರೆ.ಸಾಮಾನ್ಯವಾಗಿ ಮದುವೆ ಕಾರ್ಡ್ ಅಂದಾಕ್ಷಣ ಜನರು ಸ್ಥಳ, ದಿನಾಂಕವನ್ನು ಓದುವುದು ವಾಡಿಕೆ, ಆದರೆ ಬರೆದಿರುವ ಉಳಿದ ವಿವರಗಳನ್ನು ಯಾರೂ ಓದುವುದಿಲ್ಲ. ಆದರೆ ನನ್ನ ಲಗ್ನ ಪತ್ರಿಕೆಯಲ್ಲಿ ಹಾಗಾಗಲು ನಾನು ಬಿಡಲಿಲ್ಲ. ಲಗ್ನ ಪತ್ರಿಕೆಯ ಮೊದಲಿನಿಂದ ಕೊನೆಯವರೆಗೂ ಜನರು ಓದುವಂತಿರಬೇಕೆಂದು ಈ ಐಡಿಯಾ ಮಾಡಲಾಯಿತು ಎಂದು ಅಜಯ್ ಹೇಳುತ್ತಾರೆ.

ಅಷ್ಟಕ್ಕೂ ಮಗನ ಈ ಯೋಚನೆ ಅಪ್ಪನಿಗೇನು ಗೊತ್ತು? ಆದ್ರೆ ಇವರ ಕಾರ್ಡ್ ನಿಂದ ಅಪ್ಪನಿಗಂತೂ ಕರೆಯೋ ಕರೆ. ಹೌದು.ಕುತೂಹಲಕಾರಿಯೆಂದರೆ,ಕಾರ್ಡ್ ವೈರಲ್ ಆದ ನಂತರವೇ ಅಜಯ್ ಅವರ ಕುಟುಂಬಕ್ಕೆ ಈ ಬಗ್ಗೆ ತಿಳಿದಿದೆ.ಮದುವೆಯ ಕಾರ್ಡ್​ನಲ್ಲಿ ಅವರ ತಂದೆಯ ಫೋನ್​ನಂಬರ್​ ನಮೂದಿಸಿದ್ದರಿಂದ ಅಜಯ್ ಅವರ ತಂದೆಗೆ ಪೋನ್ ಕರೆಗಳು ಬರಲು ಪ್ರಾರಂಭಿಸಿದವು. ಆಗಲೇ ಅವರ ತಂದೆ ಆಶ್ಚರ್ಯಚಕಿತರಾಗಿ ಮಗನಿಗೆ ಕೇಳಿದ್ದಾರೆ ಎಂದು ಅಜಯ್ ತಿಳಿಸಿದ್ದಾರೆ.ವೈರಲ್ ಆದ ವೆಡ್ಡಿಂಗ್‌ ಕಾರ್ಡ್‌ ಕಂಡು ನೆಟ್ಟಿಗರು . ವಿವಾಹ ಕೂಡಾ ನ್ಯಾಯಾಲಯದ ಥೀಮ್​ನೊಂದಿಗೆ ನಡೆಯುತ್ತದೆಯೇ? ಎಂದು ಓರ್ವರು ಪ್ರಶ್ನಿಸಿದ್ದಾರೆ. ಇನ್ನು”ಇದು ನ್ಯಾಯಾಲಯದ ಸಮನ್ಸ್‌ನಂತೆ ಓದುತ್ತದೆ. ಎಂದರೆ, “ವ್ಯಕ್ತಿಯು ಇನ್ನೂ ತನ್ನ ಹೆಸರಿನ ಮುಂದೆ ‘ಅಡ್ವೊಕೇಟ್’ ಎಂಬ ಪೂರ್ವಪ್ರತ್ಯಯವನ್ನು ತಪ್ಪಿಸಿಕೊಂಡಿದ್ದಾನೆ. ಎಂದು ಹೇಳಿದ್ದಾರೆ. ನ್ಯಾಯಾಲಯದ ಥೀಮ್ ಅಲಂಕಾರಗಳ ಬಗ್ಗೆ ಆಶ್ಚರ್ಯವಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.

Leave A Reply