2020-21 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯ ಹೊಸ ಮಾರ್ಗಸೂಚಿ ಪ್ರಕಟ
ಬೆಂಗಳೂರು : 2021-22 ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು,ಬಿ.ಸಿ ಮತ್ತು ಡಿ ಗ್ರೂಪ್ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ತೇಜಾವತಿ ಎನ್ ಅವರು ವರ್ಗಾವಣೆ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಗ್ರೂಪ್ ಬಿ, ಸಿ ಮತ್ತು ಡಿ ನೌಕರರ ವರ್ಗಾವಣೆಗೆ ಸಚಿವರಿಗೆ ಒಂದು ತಿಂಗಳು ಅಧಿಕಾರ ನೀಡಲಾಗಿದ್ದು, ಜುಲೈ 22 ರಂದೇ ಸಾರ್ವತ್ರಿಕ ವರ್ಗಾವಣೆ ಮುಕ್ತಾಯಗೊಂಡಿದ್ದು, ಸಿಎಂ ಅನುಮೋದನಗೆ ವರ್ಗಾವಣೆ ಕೋರಿ ಅರ್ಜಿಗಳು ಬರುತ್ತಿವೆ. ಇದರಿಂದಾಗಿ ಇಲಾಖೆ ಕೆಲಸಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಖಾಲಿ ಸ್ಥಾನಗಳಿಗೆ ಕನಿಷ್ಠ ಸೇವಾವಧಿ ಪೂರೈಸಿರುವ ಅಧಿಕಾರಿಗಳನ್ನು ವರ್ಗಾಯಿಸಲು ಇಲಾಖಾ ಸಚಿವರಿಗೆ ಅನುಮತಿ ನೀಡಲಾಗಿದೆ. 24-11-21 ರಿಂದ 24-12-21 ರ ವರೆಗೆ ಮಾತ್ರ ಈ ಅಧಿಕಾರವನ್ನು ಸಚಿವರು ಚಲಾಯಿಸಬಹುದು. ವರ್ಗಾವಣೆ ನಂತರ ಆ ತೆರವಾದ ಸ್ಥಾನವನ್ನು ಮತ್ತೊಂದು ವರ್ಗಾವಣೆ ಮೂಲಕ ಭರ್ತಿ ಮಾಡುವಂತಿಲ್ಲ. ಮುಂದಿನ ಸಾರ್ವತ್ರಿಕ ವರ್ಗಾವಣೆಗೂ ಮೊದಲೇ ಯಾವುದೇ ಅವಧಿ ಪೂರ್ವ ವರ್ಗಾವಣೆ ಇಲ್ಲ, ಅವಧಿಪೂರ್ವ ವರ್ಗವಾಣೆ ಕೋರಿ ಸಿಎಂಗೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.