ತನ್ನ ವಿರುದ್ಧ ಎಫ್‌ಐಆರ್‌ಗೆ ಪ್ರತ್ಯುತ್ತರವಾಗಿ ಹಾಟ್ ಫೋಟೋ ಹಂಚಿಕೊಂಡ ಕಂಗನಾ ರಣಾವತ್ | ಜಿಹಾದಿ ರಾಷ್ಟ್ರಮತ್ತು ಖಲಿಸ್ತಾನ್ ಹೇಳಿಕೆ ವಿವಾದದ ಹಿನ್ನೆಲೆ !

ಮುಂಬೈ: ಭಾರತ ಮತ್ತು ರೈತರ ವಿರುದ್ಧ ದೇಶದ್ರೋಹಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮತ್ತು ಸಿಖ್ ರನ್ನು ಅವಮಾನಿಸಿದಕ್ಕಾಗಿ ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಸಮಿತಿ(ಎಸ್‌ಜಿಎಸ್‌ಎಸ್‌ಜಿಸಿ) ತನ್ನ ವಿರುದ್ಧ ದಾಖಲಿಸಿದ ಎಫ್‌ಐಆರ್‌ಗೆ ಪ್ರತಿಕ್ರಿಯೆಯಾಗಿ ನಟಿ ಕಂಗನಾ ರಣಾವತ್ ತಮ್ಮ ಮೊದಲ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್ ನಲ್ಲಿ ಕಂಗನಾ ತನ್ನ ಹಾಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕಂಗನಾ ಕೈಯಲ್ಲಿ ವೈನ್ ಗ್ಲಾಸ್ ಹಿಡಿದುಕೊಂಡು ಮಾದಕ ಉಡುಪನ್ನು ಧರಿಸಿರುವುದು ಕಾಣಬಹುದು. ‘ಇನ್ನೊಂದು ದಿನ ಮತ್ತೊಂದು ಎಫ್‌ಐಆರ್‌… ನನ್ನನ್ನು ಬಂಧಿಸಲು ಬಂದರೆ… ಸದ್ಯ ಮನೆಯಲ್ಲಿ ನನ್ನ ಮನಸ್ಥಿತಿ ಹೀಗಿದೆ’ ಎಂದು ಆಕೆ ಬರೆದುಕೊಂಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದ ಕಂಗನಾ, ‘ಇದು ದುಃಖದ ಸಂಗತಿ, ನಾಚಿಕೆಗೇಡಿನದ್ದು, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನ ದೇಶದಲ್ಲಿ ಕಾನೂನುಗಳನ್ನು ರೂಪಿಸಲಾರಂಭಿಸಿದ್ದಾರೆಯೇ ಹೊರತು, ಸಂಸತ್ತಿನಲ್ಲಿರುವ ಜನರಿಂದ ಆಯ್ಕೆಯಾದ ಸರ್ಕಾರವಲ್ಲ. ಇದು ಸಹ ಜಿಹಾದಿ ರಾಷ್ಟ್ರವಾಗಿದೆ. ಈ ರೀತಿ ಆಗಬೇಕೆಂದು ಬಯಸಿದ ಎಲ್ಲರಿಗೂ ಅಭಿನಂದನೆಗಳು,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕಂಗನಾ ರೈತರ ಚಳವಳಿಯನ್ನು ಖಲಿಸ್ತಾನಿ ಚಳವಳಿಗೆ ಹೋಲಿಸಿದ್ದರು. ತದನಂತರ ದೇಶದ ವಿವಿಧ ಪ್ರದೇಶಗಳಲ್ಲಿ ಕಂಗನಾ ವಿರುದ್ಧ ಅನೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಂಗನಾ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಅಲ್ಲದೆ ತನ್ನ ಎರಡನೇ ಪೋಸ್ಟ್‌ನಲ್ಲಿ ಆ ಮಹಿಳೆಯನ್ನು(ಇಂದಿರಾ ಗಾಂಧಿ) ಮರೆಯಬಾರದು. ಇವರೆಲ್ಲವನ್ನು ಆಕೆ ತನ್ನ ಶೂ ಅಡಿಯಲ್ಲಿ ಪುಡಿಮಾಡಿದರು. ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಅವರನ್ನು ಸೊಳ್ಳೆಗಳಂತೆ ತುಳಿದಿದ್ದರು. ಆದರೆ ದೇಶವನ್ನು ತುಂಡು ತುಂಡಾಗಲು ಬಿಡಲಿಲ್ಲ. ಆಕೆ ಸತ್ತು ದಶಕ ಕಳೆದರೂ ಅವರ ಹೆಸರಿಗೆ ಇವರು ನಡುಗುತ್ತಾರೆ ಎಂದಾಕೆ ಬರೆದುಕೊಂಡಿದ್ದರು.

error: Content is protected !!
Scroll to Top
%d bloggers like this: