ಅಲ್ಲಿನ ಮಕ್ಕಳು ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆಯಾಗುತ್ತಿದ್ದಾರಂತೆ!! ‘ಶಾಪಗ್ರಸ್ತ’ ನಿಗೂಢ ಗ್ರಾಮ ಕ್ಕೆ ದೃಷ್ಟಿಯಿಟ್ಟ ಅಗೋಚರ ಶಕ್ತಿ

ಅದೊಂದು ಪುಟ್ಟ ಗ್ರಾಮ. ನೆರೆಯ ಗ್ರಾಮದವರೆಲ್ಲ ಈ ಗ್ರಾಮವನ್ನು ಕಾಣುವಾಗ ವಿಚಿತ್ರವಾಗಿ ಕಾಣುತ್ತಾರಂತೆ.ಇಲ್ಲಿನ ಅದೊಂದು ಸಮಸ್ಯೆಯಿಂದಾಗಿ ಆ ಗ್ರಾಮದಲ್ಲಿ ಹೆಣ್ಣು ಹೆತ್ತವರ ರೋಧನೆ ಮುಗಿಲುಮುಟ್ಟುತ್ತದೆ. ಯಾಕೆಂದ್ರೆ ಆ ಗ್ರಾಮಕ್ಕೇ ಹಲವಾರು ವರ್ಷಗಳಿಂದ ಶಾಪದಂತೆ ಕಾಡಿದ ಘಟನೆಯು ಮರುಕಳಿಸುತ್ತಿದೆಯಂತೆ.


ಪ್ರಾಥಮಿಕ ಹಂತದವರೆಗೆ ಹುಡುಗಿಯಾಗಿದ್ದು, ಪ್ರೌಢಾವಸ್ಥೆಗೆ ಬರುವ ಹೊತ್ತಲ್ಲಿ ಹುಡುಗನಾಗಿ ಬದಲಾಗುವ ಸನ್ನಿವೇಶವೊಂದು ಬೆಳಕಿಗೆ ಬಂದಿದ್ದು, ವಿಜ್ಞಾನಿಗಳು ಕೂಡಾ ಬೆರಗಾದ ವಿಚಿತ್ರ ಘಟನೆಯು ನಂಬಲಸಾಧ್ಯವಾದರೂ ನಂಬಲೇಬೇಕಾದ ಕಟುಸತ್ಯ.ಹಾಗಾದರೆ ಆ ಗ್ರಾಮ ಯಾವುದೆಂದು ತಿಳಿಯುವ ಹಂಬಲವಿದ್ದರೆ ಈ ಸ್ಟೋರಿ ಯನ್ನು ನೋಡಿ.

ವಿಶ್ವ ಭೂಪಟದಲ್ಲಿ ಕಾಣುವ ‘ಲಾ ಸಲಿನಾಸ್’ ಎಂಬ ಹಳ್ಳಿಯೊಂದರಲ್ಲಿ ಇಂತಹ ಘಟನೆಗಳು ಕಂಡುಬರುತ್ತಿದ್ದೂ, ನಿರ್ದಿಷ್ಟ ವಯಸ್ಸಿನ ವರೆಗೆ ಹುಡುಗಿಯಗಿದ್ದವರು ಆ ಬಳಿಕ ಹುಡುಗನಾಗಿ ಬದಲಾಗುತ್ತಿದ್ದರಂತೆ. ಇದೇ ಕಾರಣಕ್ಕಾಗಿ ಈ ಗ್ರಾಮವನ್ನು ಶಾಪಗ್ರಸ್ತ ಗ್ರಾಮವೆಂದು ಪರಿಗಣಿಸಲಾಗಿದೆ. ರಹಸ್ಯವಾದ ಈ ಪ್ರಕರಣವನ್ನು ಯಾವ ವಿಜ್ಞಾನಿಗಳಿಗೂ ಕಂಡುಹಿಡಿಯಲಾಗಲಿಲ್ಲವಂತೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಇಲ್ಲಿನ ಮನೆಗಳಲ್ಲಿ ಹೆಣ್ಣುಮಗುವಿನ ಜನನವಾದರೆ ಆ ಮನೆಯೇ ರೋಧಿಸುತ್ತದೆಯಂತೆ. ಆ ಬಳಿಕ ಆ ಮನೆಯಲ್ಲಿ ಶೋಕ ಮಡುಗಟ್ಟಿದಂತಾಗುತ್ತದೆ ಎಂಬುವುದು ಅಲ್ಲಿನ ಜನರ ಮಾತು.ಸಂಶೋಧಕರಿಗೆ ಸಂಶೋಧನೆಯ ವಿಚಾರವಾಗಿ ಉಳಿದಿರುವ ಈ ಪ್ರಕರಣವನ್ನು ‘ವಂಶವಾಹಿ ಅಸ್ವಸ್ಥತೆ’ ಎಂದು ವೈದ್ಯಕೀಯ ಮೂಲಗಳು ಹೇಳಿದರೆ, ಸ್ಥಳೀಯ ಭಾಷೆಯಲ್ಲಿ ಇದನ್ನು ‘ಸೋಡೋಹೆಮ್ರಾಫ್ರೋಡೈಟ್ಸ್ ‘ ಎಂದು ಕರೆಯಲಾಗುತ್ತದೆ. ಒಟ್ಟಾರೆಯಾಗಿ ಯಾವುದೋ ಅಗೋಚರ ಶಕ್ತಿಯ ಕೆಟ್ಟ ದೃಷ್ಟಿ ಈ ಗ್ರಾಮಕ್ಕೆ ತಾಕಿದೆ ಎಂದು ಜನರು ಮಾತನಾಡಿಕೊಳ್ಳುತ್ತಾ ಸಮಸ್ಯೆಯಿಂದ ಕಂಗಾಲಾಗಿದ್ದಾರೆ.

Leave a Reply

error: Content is protected !!
Scroll to Top
%d bloggers like this: