ಕಾರ್ ಪಾರ್ಕ್ ಮಾಡುವಾಗ ಅಪ್ಪನ ಕಾರಿನ ಎದುರು ಆಟವಾಡುತ್ತಾ ಬಂದ ಮಗು | ಕಾರಿನ ಕೆಳಗೆ ಸಿಕ್ಕಿ ಮಗು ನುಜ್ಜುಗುಜ್ಜು !!
ಅಪಾರ್ಟ್ಮೆಂಟ್ನಲ್ಲಿ ದೊಡ್ಡ ಅವಘಡ ನಡೆದು ಹೋಗಿದೆ. ಅಚಾತುರ್ಯಕ್ಕೆ ಸೆಕ್ಯೂರಿಟಿ ಗಾರ್ಡ್ ಲಕ್ಷ್ಮಣ್ ಅವರ ಮಗ ಬಲಿಯಾಗಿದ್ದಾನೆ.
ಲಕ್ಷ್ಮಣ್ ಅವರು ಎಸ್ಯುವಿ ಕಾರನ್ನು ಒಳಗೆ ನಿಲ್ಲಿಸಲು ಮುಂದಾಗಿದ್ದರು. ಈ ವೇಳೆ ಲಕ್ಷ್ಮಣ್ ಹಿಂದೆಯೇ ನಾಲ್ಕು ವರ್ಷದ ಮಗ ಸಾತ್ವಿಕ್ ಓಡಿ ಬಂದು ರಸ್ತೆಯಲ್ಲಿ ಆಟವಾಡುತ್ತಿದ್ದ. ಕಾರ್ ಹಿಂದಕ್ಕೆ ಓಡಿ ಹೋಗಿದ್ದ ಮಗು ಅಚಾನಕ್ ಆಗಿ ಮುಂದೆ ಬಂದಿದೆ. ಇದನ್ನು ತಿಳಿಯದ ಲಕ್ಷಣ್ ಕಾರನ್ನು ಮುಂದಕ್ಕೆ ಚಲಾಯಿಸಿದ್ದಾರೆ.
ಆಗ ಮಗುವಿನ ಮೇಲೆ ಹತ್ತಿದ್ದು, ಇದು ಅವರ ಗಮನಕ್ಕೂ ಕೂಡ ಬಂದಿಲ್ಲ. ಈ ಭಯಾನಕ ದೃಶ್ಯದ ಸಂಪೂರ್ಣ ವೀಡಿಯೋ ಅಪಾರ್ಟ್ಮೆಂಟ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಪಾರ್ಟ್ಮೆಂಟ್ ಹೊರಗೆ ನಿಲ್ಲಿಸಿದ್ದ ಎಸ್ಯುವಿ ಕಾರನ್ನು ನಿಲ್ಲಿಸಲು ಲಕ್ಷ್ಮಣ್ ಮುಂದಾಗಿದ್ದ. ಇದಾದ ಕೆಲವೇ ಸೆಕೆಂಡ್ ನಂತರ ನಾಲ್ಕು ವರ್ಷದ ಸಾತ್ವಿಕ್ ಮತ್ತೊಂದು ಮಗುವಿನ ಜೊತೆ ಆಟವಾಡಲು ಗೇಟ್ನಿಂದ ಹೊರಗೆ ಬಂದಿದ್ದಾನೆ. ಈ ವೇಳೆ ಕಾರು ಹಿಂದೆ ಮುಂದೆ ಕೂಡ ಓಡಾಡಿದ ಆತ ಕಾರು ಮುಂದೆ ಬಂದು ನಿಂತಿದ್ದಾನೆ. ಈ ವೇಳೆ ಕಾರು ಮುಂದೆ ಮಗು ನಿಂತಿದ್ದು, ತಂದೆಗೆ ಅರಿವಾಗದೇ ಕಾರು ಚಲಾಯಿಸಿದ್ದಾರೆ. ಈ ವೇಳೆ ಸಾತ್ವಿಕ್ ಚಕ್ರದ ಕೆಳಗೆ ಸಿಲುಕಿ ನಜ್ಜುಗುಜ್ಜಾಗಿದ್ದಾನೆ.
ಇದಾದ ಬಳಿಕ ಏನೋ ಅನಾಹುತ ನಡೆದಿರುವ ಅರಿವಾದ ತಂದೆ ಲಕ್ಷ್ಮಣ್ಗೆ ಮಗ ಸಾವನ್ನಪ್ಪಿರುವುದು ತಿಳಿದಿದೆ. ತಕ್ಷಣಕ್ಕೆ ಆತ ಮಗ ಸಾತ್ವಿಕ್ನನ್ನು ಅಪಾರ್ಟ್ಮೆಂಟ್ಗೆ ಕೊಂಡೋಯ್ದಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಗಂಭೀರವಾಗಿ ಗಾಯಗೊಂಡ ಮಗು ಬದುಕಿ ಉಳಿಯಲಿಲ್ಲ. ಇನ್ನು ಈ ಘಟನೆ ಕುರಿತು ಎಲ್ಬಿ ನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.