ಶಾಲೆಗೆ ಹೋಗುವ ಬಸ್ ತಪ್ಪಿತೆಂದು ಮನನೊಂದ ಒಂಬತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಶರಣು!

ಸಾಮಾನ್ಯವಾಗಿ ಬಡತನ, ಕೆಲಸದ ಒತ್ತಡ, ಅನಾರೋಗ್ಯದ ಸಮಸ್ಯೆಗಳಿಗೆ ನೊಂದು ಆತ್ಮಹತ್ಯೆಗೆ ಶರಣಾಗುವುದನ್ನು ನಾವು ಕೇಳಿರುತ್ತೇವೆ. ಆದರೆ ಇಂತಹ ಘಟನೆಗಳ ಸಾಲಲ್ಲಿ ಯುವಕ-ಯುವತಿಯರೋ ಅಥವಾ ಹಿರಿಯರು ಇರುತ್ತಾರೆ. ಆದರೆ ಇಲ್ಲೊಂದು ಕಡೆ ಪುಟ್ಟ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಆತನ ಈ ನಿರ್ಧಾರದ ಹಿಂದಿರುವ ಕಾರಣ ಏನು ಗೊತ್ತೇ?

ಈ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಅಮ್ಹೋಹ್ ಗ್ರಾಮದಲ್ಲಿ ನಡೆದಿದ್ದು,9ನೇ ತರಗತಿ ವಿದ್ಯಾರ್ಥಿಯೊಬ್ಬ ಸ್ಕೂಲ್ ಬಸ್ ತಪ್ಪಿ ಹೋಯಿತು ಎಂದು ಬೇಸರದಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಆಶ್ಚರ್ಯಕರ ಘಟನೆ ನಡೆದಿದೆ.

ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, 14 ವರ್ಷ ವಯಸ್ಸಿನ ಬಾಲಕ ಮನೆಯಿಂದ ಶಾಲೆಗೆ ಹೊರಟಿದ್ದು, ಈ ವೇಳೆ ಶಾಲೆಯ ಬಸ್ ತಪ್ಪಿ ಹೋಗಿತ್ತು. ಇದರಿಂದ ತೀವ್ರವಾಗಿ ಬೇಸರಗೊಂಡ ಆತ ಅಳುತ್ತಾ ಮನೆಗೆ ಬಂದಿದ್ದಾನೆ ಎನ್ನಲಾಗಿದೆ.ಮನೆಗೆ ಬಂದ ಬಳಿಕ ಶಾಲಾ ಯೂನಿಫಾರ್ಮ್ ಹಾಕಿಕೊಂಡೇ ಇದ್ದ ಆತ ಮನೆಯ ಹಿಂಬದಿಯ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಬಾಲಕನ ಕುಟುಂಬಸ್ಥರು ತಿಳಿಸಿದ್ದಾರೆ.

ಬಾಲಕನು ಕಲಿಕೆಯಲ್ಲಿ ಮುಂದೆ ಇದ್ದ ಎನ್ನಲಾಗಿದ್ದು, ಶಾಲೆಗೆ ರಜೆ ಮಾಡಲು ಆತನಿಗೆ ಇಷ್ಟವಿರಲಿಲ್ಲ. ಹೀಗಾಗಿ ಶಾಲಾ ಬಸ್ ತಪ್ಪಿದ್ದರಿಂದ ಆತ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ. ಮಕ್ಕಳ ಮನಸ್ಸನ್ನು ಅಳತೆ ಮಾಡಲು ಸಾಧ್ಯವಿಲ್ಲ, ಸ್ಕೂಲ್ ಬಸ್ ತಪ್ಪಿ ಹೋಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಯಾರಾದರೂ ನಿರೀಕ್ಷಿಸಲು ಸಾಧ್ಯವೇ ಎಂದು ಹೆತ್ತವರು ಇದೀಗ ರೋದಿಸುವಂತಾಗಿದೆ.ಒಟ್ಟಾರೆ ಇಷ್ಟು ಸಣ್ಣ ವಯಸ್ಸಲ್ಲಿ ಕೇವಲ ಬಸ್ ಮಿಸ್ ಆಗಿದ್ದಕ್ಕೆ ಆತನ ಈ ದೊಡ್ಡ ನಿರ್ಧಾರ ಎಲ್ಲರಿಗೂ ಬೇಸರ ಪಡಿಸಿದೆ.

Leave A Reply

Your email address will not be published.