ಪುತ್ತೂರು : ಗುಂಪಿನ ನಡುವೆ ಜಕಮಕಿ , ಪೊಲೀಸ್ ಜೀಪು ಬರುತ್ತಿದ್ದಂತೆ ಓಡಿದರು !

Share the Article

ಪುತ್ತೂರು: ಶಾಲಾ ಕಾಲೇಜು ಬಿಡುವ ಸಂದರ್ಭ ನೆಲ್ಲಿಕಟ್ಟೆ ರಸ್ತೆಯಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಲ್ಲದವರ ನಡುವೆ ಮಾತಿನ ಚಕಮಕಿ ಆಗಾಗ್ಗೆ ನಡೆಯುತ್ತಿದೆ.

ನ.20ರಂದು ಮಧ್ಯಾಹ್ನದ ವೇಳೆ ನೆಲ್ಲಿಕಟ್ಟೆ ರಸ್ತೆಯಲ್ಲಿ ಸೇರಿದ ಎರಡು ಗುಂಪಿನವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದೇ ವೇಳೆ ಪೊಲೀಸ್ ಜೀಪು ಬರುತ್ತಿರುವುದನ್ನು ನೋಡಿ ಮಾತಿನ ಚಕಮಕಿಯಲ್ಲಿ ತೊಡಗಿದ್ದ ಗುಂಪು ಚುದುರಿದ ಘಟನೆ ನಡೆದಿದೆ.

ನೆಲ್ಲಿಕಟ್ಟೆ ಟೂರಿಸ್ಟ್ ಕಾರು ಪಾರ್ಕಿಂಗ್ ಸ್ಥಳದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಲ್ಲದವರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಪೊಲೀಸ್ ಜೀಪು ಸ್ಥಳಕ್ಕೆ ಬರುತ್ತಿದ್ದಂತೆ ಸ್ಥಳದಲ್ಲಿ ಗುಂಪು ಸೇರಿದವರು ಅವರವರ ಪಾಡಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

Leave A Reply