ಬಂಟ್ವಾಳ: ಹಿಟಾಚಿ ಹೊತ್ತುಕೊಂಡು ಸಾಗುತಿದ್ದ ಟಿಪ್ಪರ್ ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿ!

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಹಿಟಾಚಿ ಹೊತ್ತುಕೊಂಡು ಸಾಗುತ್ತಿದ್ದ ಟಿಪ್ಪರೊಂದು ಪಲ್ಟಿಯಾಗಿ ರಸ್ತೆಬದಿಯ ಹಳ್ಳಕ್ಕೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಮೇರ ಮಜಲಿನ ಪಕಳ ಪಾದೆ ಎಂಬಲ್ಲಿ ನಡೆದಿದೆ.

ಟಿಪ್ಪರ್ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು,ಪಕಳ ಪಾದೆ ಕಚ್ಚಾರಸ್ತೆಯಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.ತಿಂಗಳ ಹಿಂದೆ ಬಂಟ್ವಾಳದಲ್ಲಿ ಇದೇ ರೀತಿಯ ಮತ್ತೊಂದು ದುರಂತ ನಡೆದಿತ್ತು.ಈಗ ಮತ್ತೊಮ್ಮೆ ಇಂತಹುದೇ ಘಟನೆ ಅದೇ ರಸ್ತೆಯಲ್ಲಿ ನಡೆದಿದೆ.ಇನ್ನು ಈ ರಸ್ತೆ ಅಸಮರ್ಪಕ ಸ್ಥಿತಿಯಲ್ಲಿದ್ದು ಇದಕ್ಕೆ ಸಂಬಂಧಪಟ್ಟವರು ಸೂಕ್ತವಾದ ರಸ್ತೆಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿದೆ.

Leave a Reply

error: Content is protected !!
Scroll to Top
%d bloggers like this: