ಕರ್ನಾಟಕ ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಸಅದಿ ಉಸ್ತಾದ ಅವರನ್ನು ಅಭಿನಂದಿಸಿದ ಚೆನ್ನಾವರ ಮಸೀದಿಯ ಆಡಳಿತ ಮಂಡಳಿ

ಸವಣೂರು : ಕರ್ನಾಟಕ ವಕ್ಫ್ ಬೋರ್ಡ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಸಅದಿ ಉಸ್ತಾದ್ ಅವರನ್ನು ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸೀದಿ ಚೆನ್ನಾವರ, ಖಿದ್ಮತುಲ್ ಇಸ್ಲಾಂ ಆಡಳಿತ ಸಮಿತಿ ವತಿಯಿಂದ ಹೂ ಗುಚ್ಛ ನೀಡಿ ಅಭಿನಂದಿಸಲಾಯಿತು.
ಆಡಳಿತ ಸಮಿತಿ ಸದಸ್ಯರಾದ ಶಾಫಿ ಚೆನ್ನಾವರ, ಶರೀಫ್ ಕುಂಡಡ್ಕ, ಜಮಾಅತ್ ಸದಸ್ಯರಾದ ಹನೀಫ್ ಕುಂಡಡ್ಕ, ಮುಹಮ್ಮದ್ ಮೇಜರ್, ಇಸ್ಹಾಕ್ ಸಾಹಿಬ್ ಪಾಲ್ತಾಡಿ,ಅಬ್ದುಲ್ ರಹಿಮಾನ್ ಮೊಗರ್ಪಣೆ ಉಪಸ್ಥಿತರಿದ್ದರು.