ಶಿರ್ಲಾಲು : ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಂದರ ಸಾಲ್ಯಾನ್ ನಿಧನ

Share the Article

ದ.ಕ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಂದರ ಸಾಲ್ಯಾನ್(70) ಅವರು ಅಸೌಖ್ಯದಿಂದ ಇಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ಶಿರ್ಲಾಲು ಗ್ರಾಮದ ಕುರುಂಬಿಲಡ್ಕ ನಿವಾಸಿಯಾದ ಇವರು ಪ್ರಗತಿಪರ ಕೃಷಿಕರಾಗಿದ್ದು, ಅಳದಂಗಡಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಶಿರ್ಲಾಲು ಗ್ರಾ.ಪಂ ಮಾಜಿ ಅಧ್ಯಕ್ಷರಾಗಿ, ಶಿರ್ಲಾಲು ಶ್ರೀ ಗುರುನಾರಾಯಣ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿ, ಶಿರ್ಲಾಲು ಬ್ರಹ್ಮ ಬೈದರ್ಕಳ ಗರಡಿಯ ಗೌರವಾಧ್ಯಕ್ಷರಾಗಿದ್ದರು.

ಎಲ್ಲರೊಂದಿಗೂ ಆತ್ಮೀಯರಾಗಿದ್ದ ಇವರು, ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಜನಪದ ವಿದ್ವಾಂಸರಾಗಿಯೂ ಊರಿನಲ್ಲಿ ಜನಪ್ರಿಯತೆಗಳಿಸಿದ್ದರು.

ಮೃತರು ಪತ್ನಿ ರಾಜಮ್ಮ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Leave A Reply