ಕೇವಲ ಐದೂವರೆ ತಿಂಗಳಿಗೆ ಜನಿಸಿದ ಮಗು | ಹುಟ್ಟುವಾಗ 420 ಗ್ರಾಂ ತೂಕವಿದ್ದ ಈ ಮಗು ಬದುಕಿದ್ದೇ ಒಂದು ಪವಾಡ !!
ಗರ್ಭವತಿಯಾಗಿ ಒಂಬತ್ತು ತಿಂಗಳ ನಂತರ ಮಗುವಿಗೆ ಜನ್ಮ ನೀಡುವುದು ಸಾಮಾನ್ಯ. ಕೆಲವೊಮ್ಮೆ 8 ತಿಂಗಳಿಗೆ, ಇನ್ನೂ ಕೆಲವು ಸಂದರ್ಭಗಳಲ್ಲಿ 7 ತಿಂಗಳಿಗೆ ಮಕ್ಕಳು ಜನಿಸಿದ್ದು ಇದೆ. ಆದರೆ ಅಮೆರಿಕದಲ್ಲಿ ಐದೂವರೆ ತಿಂಗಳಿಗೆ ಮಗುವೊಂದು ಜನಿಸಿ ಬದುಕುಳಿದಿದೆ. ಅದಲ್ಲದೆ ಇದು ಹುಟ್ಟುತ್ತಲೇ ಗಿನ್ನೆಸ್ ರೆಕಾರ್ಡ್ ಕೂಡ ತನ್ನ ಹೆಸರಿಗೆ ಬರೆದುಕೊಂಡಿದೆ!
ಅಂದಹಾಗೆ ಇದು ಇತ್ತೀಚಿನ ಸುದ್ದಿಯಲ್ಲ. 2020ರ ಜುಲೈ 4 ರಂದು ಅಮೆರಿಕದ ಅಲಬಾಮಾದ ಮಿಶೆಲ್ ಬಟ್ಲರ್ ಗೆ 5.5 ತಿಂಗಳಿಗೆ ಒಂದು ಗಂಡು ಮತ್ತೊಂದು ಹೆಣ್ಣು ಮಗು ಜನಿಸಿದೆ. ಚಿಕಿತ್ಸೆಗೆ ಸ್ಪಂದಿಸದೆ ಹೆಣ್ಣು ಮಗು ಸಾವನ್ನಪ್ಪಿದ್ದರೆ ಗುಂಡು ಮಗು ಬದುಕುಳಿದಿದೆ.
ಅದಲ್ಲದೆ ಇಷ್ಟು ಬೇಗ ಜನಿಸಿದ ಯಾವ ಮಕ್ಕಳು ಈವರೆಗೆ ಬದುಕುಳಿದಿಲ್ಲ. ಈ ಗಂಡು ಮಗು ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದು, ವೈದ್ಯ ಲೋಕವನ್ನೇ ಅಚ್ಚರಿಗೊಳಿಸಿದೆ. ಹಾಗಾಗಿ ಈ ಮಗು ವಿಶ್ವದ ಏಕೈಕ ಮೋಸ್ಟ್ ಪ್ರಿ ಮೆಚ್ಯೂರ್ಡ್ ಬೇಬಿ ಎಂದು ಗಿನ್ನಿಸ್ ರೆಕಾರ್ಡ್ ಮಾಡಿದೆ.
ಅಕಾಲಿಕವಾಗಿ ಜನಿಸಿದ ಮಗುವನ್ನು ಜೀವಂತವಾಗಿರಿಸಲು ಕೃತಕ ಉಸಿರಾಟದ ಬೆಂಬಲ ಮತ್ತು ಅವನ ಹೃದಯ ಮತ್ತು ಶ್ವಾಸಕೋಶಗಳಿಗೆ ವಿಶೇಷ ಔಷಧೋಪಚಾರ ನೀಡಲಾಗಿತ್ತು. ಈ ವರ್ಷ ಏಪ್ರಿಲ್ 6 ರಂದು ಮಗುವನ್ನು ಮನೆಗೆ ಕರೆದೊಯ್ಯಲು ಅವಕಾಶ ನೀಡಲಾಯಿತು. ಮಿಚೆಲ್ ಚೆಲ್ಲಿ ಬಟ್ಲರ್ ಅವರ ಗರ್ಭಧಾರಣೆಯು ಬರ್ಮಿಂಗ್ಲಾಮ್‌ನಲ್ಲಿರುವ ಅಲಬಾಮಾ ಅವರು 21 ವಾರಗಳ ಉತ್ತಮವಾಗಿತ್ತು. ಆದರೆ ಕಳೆದ ವರ್ಷ ಜುಲೈ 4 ರಂದು ತುರ್ತು ಶಸ್ತ್ರಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚೆಲ್ಲಿ ತನ್ನ ಮಗುವಿನ ಜನ್ಮಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಜುಲೈ 5 ರಂದು ಮಧ್ಯಾಹ್ನ 1 ಗಂಟೆಗೆಗರ್ಭಾವಸ್ಥೆಯ ವಯಸ್ಸಿನಲ್ಲಿ ಕರ್ಟಿಸ್‌ಗೆ ಜನ್ಮ ನೀಡಿದರು. ಈ ಮೂಲಕ ಸುಮಾರು 19 ವಾರಗಳ ಅವಧಿಗೆ ಮುಂಚಿತವಾಗಿ ಜನಿಸಿತು.
ಮಗು ಬದುಕುಳಿಯುತ್ತದೆಯೋ ಎಂದು ತಿಳಿದಿರಲಿಲ್ಲ, ಆದ್ದರಿಂದ ಪ್ರಾರ್ಥನೆಯನ್ನು ಮುಂದುವರಿಸಲು ನನಗೆ ವೈದ್ಯರು ಹೇಳಿದ್ದರು ಎಂದು ಚೆಲ್ಲಿ ಅವರು ಹೇಳಿದರು.ಯುಎಬಿ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಪ್ರಾಧ್ಯಾಪಕ ಡಾ ಬ್ರಿಯಾನ್ ಸಿಕ್ಸ್ ಪ್ರಕಾರ, ಈ ವಯಸ್ಸಿನ ಶಿಶುಗಳು ಬದುಕುಳಿಯುವುದಿಲ್ಲ ಎಂದು ಅಂಕಿಅಂಶಗಳು ಹೇಳುತ್ತವೆ ಎಂದಿದ್ದಾರೆ. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ 275 ದಿನಗಳನ್ನು ಕಳೆದ ನಂತರ, ಈ ವರ್ಷದ ಏಪ್ರಿಲ್ 6 ರಂದು ಮನೆಗೆ ಹೋಗಲು ಅವಕಾಶ ನೀಡಲಾಯಿತು.
ಮಗು ಹುಟ್ಟಿದ ಬಳಿಕ ಬದುಕುವುದು ಗ್ಯಾರಂಟಿಯಿಲ್ಲ ಎಂದು ವೈದ್ಯರು ಹೇಳಿದ್ದರಂತೆ. ಏಕೆಂದರೆ ಗಂಡು ಮಗು ಹುಟ್ಟಿದಾಗ ಕೇವಲ 420 ಗ್ರಾಂ ಮಾತ್ರ ತೂಕವಿತ್ತು. ಆದರೀಗ ಮಗು ಸಾಮಾನ್ಯ ಮಗುವಿನಂತೆ ಇರುವುದಲ್ಲದೆ ಮಾಮೂಲಿ ಮಗುವಿನಂತೆ ತನ್ನ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ.