ಇನ್ನು ಮುಂದೆ ಆಧಾರ್ ಕಾರ್ಡ್ ಪರಿಶೀಲನೆ ಆಫ್‌ಲೈನ್‌ನಲ್ಲಿಯೂ ಲಭ್ಯ !! | ಹೇಗೆ ಅಂತೀರಾ?? ಇಲ್ಲಿದೆ ಮಾಹಿತಿ

ಈಗ ಎಲ್ಲಾ ರೀತಿಯ ಕೆಲಸಗಳಿಗೂ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಈ ದಾಖಲೆ ಇಲ್ಲದೆ ಯಾವುದೇ ಸರ್ಕಾರಿ ಕೆಲಸ ಪೂರ್ಣಗೊಳ್ಳುವುದಿಲ್ಲ. ಸರ್ಕಾರಿ ಸೌಲಭ್ಯದ ಲಾಭವನ್ನು ಪಡೆಯುವುದು ಕೂಡಾ ಆಧಾರ್ ಇಲ್ಲದೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಇದೀಗ ಆಧಾರ್ ಪರಿಶೀಲನೆಯನ್ನು ಆಫ್‌ಲೈನ್‌ನಲ್ಲಿಯೂ ಮಾಡಬಹುದು. ಈ ಅಪ್ಡೇಟ್ ಬಗ್ಗೆ ಸರ್ಕಾರ ಇತ್ತೀಚೆಗೆ ಅಧಿಸೂಚನೆಯನ್ನು ಹೊರಡಿಸಿದೆ.

 

ಆಫ್‌ಲೈನ್‌ನಲ್ಲಿಯೂ ಆಧಾರ್ ಪರಿಶೀಲನೆ :

ಯುಐಡಿಎಐ (UIDAI) ರಚಿಸಿದ ಡಿಜಿಟಲ್ ಸಹಿ ಮಾಡಿದ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ, ಜನರು ತಮ್ಮ ಆಧಾರ್ ಅನ್ನು ಆಫ್‌ಲೈನ್‌ನಲ್ಲಿ ಪರಿಶೀಲಿಸಬಹುದಾಗಿದೆ. ಇದಕ್ಕಾಗಿ ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಮಾತ್ರ ಬಳಸಬೇಕಾಗುತ್ತದೆ.

ಆಧಾರ್ ನ ಈ ಹೊಸ ನಿಯಮಗಳನ್ನು ನವೆಂಬರ್ 8 ರಂದು ಜಾರಿಗೆ ತಂದಿದ್ದು, ಇದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಆಧಾರ್‌ನ ಆಫ್‌ಲೈನ್ ಪರಿಶೀಲನೆ ಹೇಗೆ ಮಾಡುವುದು ಎನ್ನುವುದನ್ನು ವಿವರವಾಗಿ ವಿವರಿಸಲಾಗಿದೆ.

UIADI ಆನ್‌ಲೈನ್ ಪರಿಶೀಲನೆಯಲ್ಲಿ ಅಸ್ತಿತ್ವದಲ್ಲಿರುವ ಪ್ರಕ್ರಿಯೆಯ ಜೊತೆಗೆ QR ಕೋಡ್ ಪರಿಶೀಲನೆ (QR Code Verification), ಆಧಾರ್ ಪೇಪರ್‌ಲೆಸ್ ಆಫ್‌ಲೈನ್ ಇ-ಕೆವೈಸಿ ಪರಿಶೀಲನೆ (Aadhaar Paperless Offline e-KYC Verification), ಇ-ಆಧಾರ್ ಪರಿಶೀಲನೆಯನ್ನು (e-Aadhaar Verification) ಪರಿಚಯಿಸಿದೆ. ಆಫ್‌ಲೈನ್ ಪೇಪರ್ ಆಧಾರಿತ ಪರಿಶೀಲನೆ ಮತ್ತು ಇತರ ಆಫ್‌ಲೈನ್ ಪರಿಶೀಲನೆಯ ಪ್ರಕಾರವನ್ನು ಕೂಡಾ ಸೇರಿಸಲಾಗಿದೆ.

ಈ ಹೊಸ ನಿಯಮದೊಂದಿಗೆ, ಆಧಾರ್ ಬಳಕೆದಾರರಿಗೆ ಅದನ್ನು ಡಿಜಿಟಲ್ ಸಹಿಯಾಗಿ ಉಪಯೋಗಿಸಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಇದರ ಮೂಲಕ ಆಧಾರ್ ಪೇಪರ್‌ಲೆಸ್ ಆಫ್‌ಲೈನ್ ಇ-ಕೆವೈಸಿ ಮಾಡಲು ಸುಲಭವಾಗುತ್ತದೆ.

ಒನ್ ಟೈಮ್ ಪಿನ್ ಮತ್ತು ಬಯೋಮೆಟ್ರಿಕ್ ಆಧಾರಿತ ದೃಢೀಕರಣದಂತಹ ಪರಿಶೀಲನೆಯ ಇತರ ವಿಧಾನಗಳು, ಆಫ್‌ಲೈನ್ ಆಯ್ಕೆಯೊಂದಿಗೆ ಮುಂದುವರಿಯುತ್ತದೆ. ಆಧಾರ್ ಡೇಟಾವನ್ನು ಪರಿಶೀಲಿಸುವ ಅಧಿಕೃತ ಏಜೆನ್ಸಿಗಳು ದೃಢೀಕರಣದ ಯಾವುದೇ ವಿಧಾನವನ್ನು ಆಯ್ಕೆ ಮಾಡಬಹುದು.

ತಮ್ಮ ಇ-ಕೆವೈಸಿ ಡೇಟಾವನ್ನು ಯಾವುದೇ ಸಮಯದಲ್ಲಿ ಸಂಗ್ರಹಿಸಲು, ಪರಿಶೀಲನಾ ಏಜೆನ್ಸಿಗೆ ನೀಡಿದ ಸಮ್ಮತಿಯನ್ನು ಹಿಂಪಡೆಯುವ ಅವಕಾಶವನ್ನು ಆಧಾರ್ ಸಂಖ್ಯೆ ಹೊಂದಿರುವವರಿಗೆ ಈ ಹೊಸ ನಿಯಮ ನೀಡುತ್ತದೆ.

Leave A Reply

Your email address will not be published.