ಹಲ್ಲು ಕೀಳುತ್ತೇನೆಂದು ಮಾನ ಕಿತ್ತ ಕಿರಾತಕ ವೈದ್ಯ | ಅರಿವಳಿಕೆ ಔಷಧಿ ನೀಡಿ ದಂತ ವೈದ್ಯನಿಂದ ಅತ್ಯಾಚಾರ

Share the Article

ಹಲ್ಲು ನೋವೆಂದು ಕ್ಲಿನಿಕ್​ಗೆ ಬಂದಿದ್ದ 32 ವರ್ಷದ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್​ ನೀಡಿ ಬಳಿಕ ಆಕೆಯ ಮೇಲೆ ದಂತ ವೈದ್ಯನೊಬ್ಬ ಅತ್ಯಾಚಾರ ನಡೆಸಿ ವೈದ್ಯ ಲೋಕ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ.

ಅತ್ಯಾಚಾರ ಎಸಗಿದ್ದಲ್ಲದೆ, ಆ ಅಶ್ಲೀಲ ದೃಶ್ಯದ ವಿಡಿಯೋವನ್ನೂ ಸಹ ಚಿತ್ರಿಸಿಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ.

ಹಲ್ಲುನೋವಿನಿಂದ ಬಳಲುತ್ತಿದ್ದ ಸಂತ್ರಸ್ತೆ ಉತ್ತರ ಪ್ರದೇಶದ ಸೈದ್ಪುರ ಬಳಿ ಆಸ್ಪತ್ರೆಗೆ ಅಕ್ಟೋಬರ್​ 16ರಂದು ತೆರಳಿದ್ದರು. ಹಲ್ಲಿನ ಪರಿಶೀಲನೆ ನಡೆಸಿದ ವೈದ್ಯ ಹಲ್ಲು ಕೀಳಿಸಬೇಕು ಎಂದು ಹೇಳಿದ್ದಾನೆ.

ಇದಾಗಿ ಕೆಲ ದಿನಗಳ ಬಳಿಕ ಸಂತ್ರಸ್ತೆ ಮತ್ತೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ. ಆಗ ಆಕೆಗೆ ಹಲ್ಲು ಕೀಳುವ ವೇಳೆ ನೋವಿನ ಅನುಭವವಾಗಬಾರದೆಂದು ಪ್ರಜ್ಞೆ ತಪ್ಪಿಸುವುದಾಗಿ ವೈದ್ಯ ಹೇಳಿದ್ದಾನೆ. ಆದರೆ ಹಲ್ಲು ಕಿತ್ತ ಬಳಿಕ ವೈದ್ಯ ಆಕೆಯ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ.
ಈ ಸಂಬಂಧ ಮಹಿಳೆ ತಡವಾಗಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ಪತಿಗೆ ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.