ತೆಪ್ಪಗಿದ್ದ ಕೋಳಿಯನ್ನು ಕೆಣಕಿದ ಬಾಲಕ | ಕೆಂಡದಂತೆ ಕೋಪಗೊಂಡು ಆತನನ್ನು ಅಟ್ಟಾಡಿಸಿ ಸರಿಯಾಗಿ ಕುಕ್ಕಿ ಸೇಡು ತೀರಿಸಿ ಕೊಂಡ ಕೋಳಿ!!

ಸಾಮಾಜಿಕ ಮಾಧ್ಯಮದ ಪ್ರಪಂಚವು ಲಕ್ಷಾಂತರ ವೀಡಿಯೊಗಳಿಂದ ತುಂಬಿ ಹೋಗಿದೆ. ಪ್ರತಿದಿನ ಈ ವೇದಿಕೆಯಲ್ಲಿ ಹಲವು ವೀಡಿಯೊಗಳನ್ನು ವೀಕ್ಷಿಸಲಾಗುತ್ತದೆ ಮತ್ತು ಅಪ್‌ಲೋಡ್ ಮಾಡಲಾಗುತ್ತದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸುವ ವಿಡಿಯೋಗಳು ಕೆಲವು ಮಾತ್ರ. ಪ್ರಸ್ತುತ ವೀಡಿಯೊವೊಂದು ವಿವಿಧ ಸಾಮಾಜಿಕ ವೇದಿಕೆಗಳಲ್ಲಿ ಸಾಕಷ್ಟು ವೀಕ್ಷಣೆಯನ್ನು ಗಿಟ್ಟಿಸಿಕೊಂಡಿದೆ.

ಈ ವೀಡಿಯೋ ಒಂದು ಕೋಳಿ ಮತ್ತು ಓರ್ವ ಬಾಲಕನಿಗೆ ಸಂಬಂಧಿಸಿದೆ. ಆದರೆ ವಿಡಿಯೋದಲ್ಲಿ ಕಾಣುತ್ತಿರುವ ದೃಶ್ಯವನ್ನು ನೋಡಿ ನಗು ತಡೆದುಕೊಳ್ಳುವುದು ಮಾತ್ರ ಕಷ್ಟ. ಈ ತಮಾಷೆಯ ವೀಡಿಯೋವನ್ನು ಇದುವರೆಗೆ ಸಾವಿರಾರು ಬಾರಿ ವೀಕ್ಷಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಇದನ್ನು ಇಷ್ಟಪಟ್ಟಿದ್ದಾರೆ.

ಕೆಲ ಸೆಕೆಂಡುಗಳ ವೀಡಿಯೋದಲ್ಲಿ ಕೋಳಿಯೊಂದು ಬಯಲಿನಲ್ಲಿ ತನ್ನಷ್ಟಕ್ಕೆ ತಾನೇ ಆರಾಮವಾಗಿ ನಡೆದಾಡಿಕೊಂಡಿರುತ್ತದೆ. ಈ ಸಂದರ್ಭದಲ್ಲಿ ಬಾಲಕನೊಬ್ಬ ಅದಕ್ಕೆ ಉಪದ್ರ ನೀಡಲು ಮುಂದಾಗಿದ್ದಾನೆ. ಕೆಲ ಹೊತ್ತಲ್ಲೇ ಹುಡುಗನಿಂದ ಕಿರುಕುಳಕ್ಕೆ ಒಳಗಾದ ಕೋಳಿ ಕೂಡ ತನ್ನ ಪ್ರತೀಕಾರ ತೀರಿಸಿಕೊಂಡಿದೆ. ಕೋಳಿ ಬಾಲಕನನ್ನು ಕಚ್ಚಲು ಆತನ ಹಿಂದೆ ಬಿದ್ದಿದೆ. ತನ್ನ ಮೇಲೆಯೇ ಕೋಳಿಯ ದಾಳಿಯನ್ನು ನೋಡಿದ ಹುಡುಗ ಕಿರುಚುತ್ತಾ ಓಡಲು ಪ್ರಾರಂಭಿಸುತ್ತಾನೆ, ಆದರೆ ಕೋಳಿ ಅವನನ್ನು ಬಿಡಲಿಲ್ಲ ಮತ್ತು ಬಾಲಕನಿಗೆ ಕೋಳಿ ಕುಕ್ಕಿ-ಕುಕ್ಕಿ ಹಿಂಸೆ ನೀಡಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

hepgul5 ಹೆಸರಿನ ಬಳಕೆದಾರರು ಈ ವಿಡಿಯೋ ಅನ್ನು ಸಾಮಾಜಿಕ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸ್ವಾರಸ್ಯಕರ ವಿಡಿಯೋಗೆ ನೆಟ್ಟಿಗರು ಭಾರೀ ಕಾಮೆಂಟ್ ಮಾಡುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: