ರಾತ್ರಿಯ ವೇಳೆ ಮಗನ ಪ್ರಿಯತಮೆಯ ಪಕ್ಕ ಬಂದು ಅಮರಿ ಕೊಂಡಿದ್ದ ಆತನ ಅಪ್ಪ…ಹಾಗೆ ನಡೆದಿತ್ತು ನಡೆಯಬಾರದ್ದು !!

ಚಿಕ್ಕಮಗಳೂರು: ಮಗನ ಪ್ರೇಯಸಿಯ ಮೇಲೆ ಆತನ ಅಪ್ಪನೇ ಅತ್ಯಾಚಾರ ಘಟನೆ ನಡೆದಿದ್ದು, ಚಿಕ್ಕಮಗಳೂರಿನಲ್ಲಿ ಮತ್ತೆ  ನಂಬಿಕೆ ಎಂಬುದು ಅಲುಗಾಡಿದೆ. ವಿವರಕ್ಕೆ ಸ್ಟೋರಿ ಓದಿ.

ಆಕೆ 10ನೇ ತರಗತಿ ಓದುತ್ತಿದ್ದು, ಆಕೆ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ಓದುತ್ತಿದ್ದಳು. ದೀಪಾವಳಿ ಹಬ್ಬಕ್ಕೆ ಎಂದು ಆಕೆ ಅಮ್ಮನ ಮನೆಗೆ ಬಂದವಳು ಮರುದಿನ ಶಾಲೆ ಮುಗಿಸಿ ಅತ್ತೆ ಮನೆಗೆ ಹೋಗುತ್ತೇನೆ ಎಂದು ಹೇಳಿ ಆಮ್ಮನ ಮನೆಯಿಂದ ಹೋಗಿದ್ದಳು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆದರೆ ಆಕೆ ಅತ್ತೆ ಮನೆಯತ್ತ ಹೋಗಿಲ್ಲ. ಸಂಜೆ 6 ಗಂಟೆಗೆ ಆಕೆ ಬಂದಿಲ್ಲ ಎಂದು ಅತ್ತೆ ಮನೆಯ ಸಂಬಂಧಿಕರು ಬಾಲಕಿ ತಾಯಿಗೆ ಫೋನ್ ಮಾಡಿದ್ದರು. ಆಕೆಯ ತಾಯಿ ವಿಚಾರಿಸಿದಾಗ ಬಾಲಕಿ ಶಾಲೆಗೆ ಹೋಗದೇ ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಯುವಕನ ಮನೆಗೆ ಹೋಗಿರುವುದಾಗಿ ಗೊತ್ತಾಗಿದೆ. ಬಳಿಕ ಮರುದಿನ ಆಕೆಯನ್ನ ತಾಯಿ ಮನೆಗೆ ಕರೆತಂದಿದ್ದಾಳೆ.

ಮನೆಗೆ ಬಂದ ಮಗಳನ್ನು ತಾಯಿ ಸರಿಯಾಗಿ ವಿಚಾರಿಸಿದ್ದಾಳೆ. ಹುಡುಗಿಯಾಗಿ ಹೀಗೆ ಬೇರೊಬ್ಬರ ಮನೆಗೆ ಹೋದ ಬಗ್ಗೆ ಸಮಾ ಬೈದಿದ್ದಾರೆ.  ಬಾಲಕಿಯು ಆಗ ಎಲ್ಲ ವಿವರ ಬಿಚ್ಚಿಟ್ಟಿದ್ದಾಳೆ. ತಾನು ಎರಡು ವರ್ಷದಿಂದ ಪ್ರೀತಿಸುತ್ತಿದ್ದವನ ಮನೆಗೆ ಹೋಗಿದ್ದಾಗಿ ಆಕೆ ತಿಳಿಸಿ, ಅಲ್ಲಿ ಪ್ರಿಯತಮ ಮನೆಯಲ್ಲಿ ಇರಲಿಲ್ಲ. ಫೋನ್ ಮಾಡಿದರೂ ಸಂಪರ್ಕ ಸಿಗಲಿಲ್ಲ. ಇನ್ನೇನು ವಾಪಸ್ ಹೊರಡೋಣ ಅನ್ನುವಾಗ, ಆತನ ತಂದೆ ನನಗೆ ಇಲ್ಲಿಯೇ ಇರು, ನನ್ನ ಮಗ ನಾಳೆ ಬರುತ್ತಾನೆ ಎಂದು ಬಲವಂತವಾಗಿ ಉಳಿಸಿಕೊಂಡರು. ಹೀಗಾಗಿ ಆ ದಿನ ಅವರ ಮನೆಯಲ್ಲೇ ಊಟ ಮಾಡಿ ಮಲಗಿದ್ದೆ. ಆದರೆ ರಾತ್ರಿ ಹೊತ್ತಲ್ಲಿ ಪ್ರಿಯತಮನ ಅಪ್ಪ ಆಕೆಯ ಪಕ್ಕ ಬಂದು ಮಲಗಿ ಆಕ್ರಮಿಸಿ ಬಿಟ್ಟಿದ್ದ. ಹಾಗೆ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ.
ಮಗಳು ಘಟನೆ ವಿವರಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡ ತಾಯಿ ಧೈರ್ಯ ಒಗ್ಗೂಡಿಸಿಕೊಂಡು ಆರೋಪಿ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: