ವಿಧಾನ ಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಎಂ.ಎನ್.ಆರ್

ದ.ಕ. ದ್ವಿಸದಸ್ಯ ಕ್ಷೇತ್ರದ ಸ್ಥಳೀಯಾಡಳಿತ ಈಗಿನ ಬಲಾಬಲ ಪರಿಗಣಿಸಿದರೆ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನ ಗೆಲ್ಲುವ ಅವಕಾಶವಿದೆ. ಈತನ್ಮಧ್ಯೆ ಸಹಕಾರಿ ಕ್ಷೇತ್ರದ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಪಕ್ಷೇತರರಾಗಿ ಕಣಕ್ಕಿಳಿಯುವ ಇಂಗಿತ ವ್ಯಕ್ತ ಪಡಿಸಿರುವುದು ಕುತೂಹಲ ಮೂಡಿಸಿದೆ.

ರಾಜೇಂದ್ರ ಕುಮಾರ್ 27 ವರ್ಷಗಳಿಂದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ವಿಧಾನ ಪರಿಷತ್‌ನಲ್ಲಿ ಯಾವುದೇ ಪಕ್ಷದ ಸಹಕಾರ ಕ್ಷೇತ್ರದವರಿಗೂ ಆದ್ಯತೆ ನೀಡುವಂತೆ ಪ್ರತಿಪಾದಿಸಿದ್ದರು. ಈ ಹಿಂದೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರೊಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡವರು. ಪ್ರಸ್ತುತ ಯಾವುದೇ ಪಕ್ಷದ ಜತೆಗೆ ಇಲ್ಲ.

ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬುದಾಗಿ ಸಹಕಾರಿ ಕ್ಷೇತ್ರದ ಮಿತ್ರರಿಂದ ಹಾಗೂ ಹಿತೈಷಿಗಳಿಂದ ಒತ್ತಡ ಬರುತ್ತಿದೆ. ಪರಿಷತ್‌ನಲ್ಲಿ ಸಹಕಾರಿ ಕ್ಷೇತ್ರಕ್ಕೆ ಒಂದು ಸ್ಥಾನವನ್ನು ಮೀಸಲಿಡಬೇಕೆಂಬುದು ನಮ್ಮ ಆಶಯ. ಈ ಹಿಂದೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದೆ. ಈಗ ಯಾವ ಪಕ್ಷದ ಜತೆಗೂ ಇಲ್ಲ. ಈ ಬಾರಿ ನಾನು ಸ್ಪರ್ಧಿಸುವುದಾದರೆ ಸಹಕಾರ ಕ್ಷೇತ್ರದ ಜನರ ಪರವಾಗಿ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುವೆ. ವಾರದೊಳಗೆ ಸ್ಪಷ್ಟ ನಿರ್ಧಾರ ಪ್ರಕಟಿಸುತ್ತೇನೆ.

– ಡಾ| ಎಂ.ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರು, ಎಸ್‌ಸಿಡಿಸಿಸಿ ಬ್ಯಾಂಕ್‌

Leave A Reply

Your email address will not be published.