ನ.9 : ಸವಣೂರು ಗ್ರಾ.ಪಂ.ನಲ್ಲಿ ತರಬೇತಿ ಕಾರ್ಯಾಗಾರ
ಸವಣೂರು : ಸವಣೂರು ಗ್ರಾಮ ಪಂಚಾಯತ್ ಗಳಲ್ಲಿ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸುವ ನಿಟ್ಟಿನಲ್ಲಿ ನ.9ರಂದು ಪೂರ್ವಾಹ್ನ ಗಂಟೆ 10.00 ರಿಂದ ಗ್ರಾಮ ಪಂಚಾಯತ್ ಸಭಾಭವನ ಕುಮಾರಧಾರದಲ್ಲಿ ಕಾರ್ಯಾಗಾರ ನಡೆಯಲಿದೆ.
ತರಬೇತಿ ಕಾರ್ಯಾಗಾರವನ್ನು ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕ ಭರತ್ ರಾಜ್ ಕೆ. ನಡೆಸಿಕೊಡುವರು.
ತರಬೇತಿ ಕಾರ್ಯದಲ್ಲಿ ಈ ಕೆಳಗಿನ ವಿಷಯಗಳ ಕುರಿತಾಗಿದ್ದು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.
- ವೈಯುಕ್ತಿಕ: ಗೃಹ ಶೌಚಾಲಯಗಳ ಬಳಕೆ ಹಾಗೂ ನಿರ್ವಹಣೆ, ಶೌಚಾಲಯಗಳ ದುರಸ್ತಿ
- ಘನತ್ಯಾಜ್ಯ ವಿಲೇವಾರಿ ವಿಧಾನಗಳು, ನಿರ್ವಹಣೆ ಮತ್ತು ಸಮುದಾಯದ ಜವಾಬ್ದಾರಿಗಳು
*ದ್ರವ ತ್ಯಾಜ್ಯ ವಿಲೇವಾರಿ ವಿಧಾನಗಳು, ನಿರ್ವಹಣೆ ಮತ್ತು ಜವಾಬ್ದಾರಿಗಳು
*ODF Plus ಘೋಷಿಸುವಲ್ಲಿ ಗ್ರಾಮ ಪಂಚಾಯತಿಯ ಜವಾಬ್ದಾರಿಗಳು
*ಯೋಜನಾ ಅನುಷ್ಠಾನ ಕುರಿತು ಹಮ್ಮಿಕೊಂಡ ವಿವಿಧ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳು ODF Plus ಘೋಷಿಸುವ ವಿಧಾನಗಳು