ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ | ರಾಜು ಹೊಸ್ಮಠ ವಿರುದ್ದ ಪ್ರಕರಣ ದಾಖಲು

ಪುತ್ತೂರು: ಅಪ್ರಾಪ್ತ ಬಾಲಕಿಗೆ ವ್ಯಕ್ತಿಯೋರ್ವರು ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಠಾಣೆಗೆ ದೂರು ನೀಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.ಆರೋಪಿಯನ್ನು ರಾಜು ಹೊಸ್ಮಠ ಎನ್ನಲಾಗಿದೆ.

2019 ರಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಂಗಿ ರಾಜು ಹೊಸ್ಮಠ ರವರ ಕಚೇರಿಗೆ ತಂದೆಯೊಂದಿಗೆ ತೆರಳಿದ್ದು, ಈ ವೇಳೆ ರಾಜು ರವರ ಪರಿಚಯವಾಗಿದ್ದು, ನಂತರ ಮತ್ತೊಂದು ದಿನ ರಾಜು ರವರ ಕಚೇರಿಯಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಂಗಿಯನ್ನು ಅವರ ತಂದೆ ಬಿಟ್ಟು ಹೋಗಿದ್ದು, ಆ ವೇಳೆ ರಾಜು ರವರು ಅಪ್ರಾಪ್ತ ಬಾಲಕಿಯ ತಂಗಿಯನ್ನು ಮತ್ತು ಇನ್ನೊಂದು ಬಾಲಕಿಯನ್ನು ತಿಂಡಿ ತರುವ ನೆಪವೊಡ್ಡಿ ಅವರನ್ನು ಹೊರಗಡೆ ಕಳಿಸಿದ್ದು, ಈ ಸಂದರ್ಭದಲ್ಲಿ ರಾಜು ಹೊಸ್ಮಠ ಆಕೆಯನ್ನು ತನ್ನ ಬಳಿ ಕರೆದು ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅಪ್ರಾಪ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಈ ಬಗ್ಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 39/2021 ಕಲಂ: 354(A) ಭಾ.ದಂ.ಸಂ ಮತ್ತು ಕಲಂ 8 ಪೋಕ್ಸ್ ಕಾಯ್ದೆ 2012 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.