ಒಂದೇ ದಿನದಲ್ಲಿ 526 ಜನ ಬಲಿಯಾಗುವ ಮೂಲಕ ಮತ್ತಷ್ಟು ಏರಿಕೆ ಕಂಡ ಕೊರೋನ ಪ್ರಕರಣ

Share the Article

ನವದೆಹಲಿ:ಕೊರೋನ ಅಟ್ಟಹಾಸದ ಹೆಸರು ಮಾಸುತ್ತಿರುವಂತೆಯೇ ಸಾವಿನ ಸಂಖ್ಯೆ ಎತ್ತರಕ್ಕೆ ಏರುತ್ತಿದೆ.ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ ಕಂಡಿದೆ. ಆದರೆ ಕಳೆದ 24 ಗಂಟೆಯಲ್ಲಿ 10,853 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಒಂದೇ ದಿನದಲ್ಲಿ 526 ಜನ ಮಹಾಮಾರಿಗೆ ಬಲಿಯಾಗಿದ್ದು,ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 460791 ಕ್ಕೆ ಏರಿಕೆಯಾಗಿದೆ.ಇನ್ನು ದೇಶದಲ್ಲಿ 144845 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 12432 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 33749900 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ನಿನ್ನೆ ದೇಶದಲ್ಲಿ 9,19,996 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, 24 ಗಂಟೆಯಲ್ಲಿ 28,40,174 ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 1,08,21,66,365 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.ಆದರೂ ಕೊರೋನ ಮಹಾಮಾರಿ ಕಾಣಿಸಿಕೊಳ್ಳುತ್ತಿರುವುದು ಆತಂಕವೇ ಸರಿ.

Leave A Reply

Your email address will not be published.