ಪಲ್ಟಿಯಾದ ತೈಲ ಸಾಗಾಟದ ಟ್ಯಾಂಕರ್ | ತೈಲಕ್ಕಾಗಿ ಮುಗಿಬಿದ್ದ ನೂರಕ್ಕೂ ಹೆಚ್ಚು ಜನರು ಸಜೀವ ದಹನ

ಜನರ ಆಸೆಗೆ ಮಿತಿಯಿಲ್ಲ. ಆದರೆ ಆ ಅತಿಯಾಸೆಯೇ ಅವರ ಜೀವಕ್ಕೆ ಕುತ್ತು ತರುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಇದಕ್ಕೆ ಸಾಕ್ಷಿಯಾಗಿದೆ ಈ ಘಟನೆ.

ಯಾವುದಾದರೂ ವಾಹನಗಳು ಅಪಘಾತಗೊಂಡರೆ ಅವುಗಳಲ್ಲಿನ ಸಾಮಗ್ರಿಗಳನ್ನು ಕೊಳ್ಳಲು ಜನ ಮುಗಿ ಬೀಳುವುದು ಭಾರತ ಮಾತ್ರವಲ್ಲದೇ ಎಲ್ಲಾ ದೇಶಗಳಲ್ಲಿಯೂ ಮಾಮೂಲಾಗಿದೆ. ಹೀಗೆ ತೈಲವನ್ನು ಒಯ್ಯುತ್ತಿದ್ದ ಟ್ಯಾಂಕರ್ ಪಲ್ಟಿ ಹೊಡೆದಾಗ ತೈಲಕ್ಕಾಗಿ ಆಸೆಪಟ್ಟು ಮುಗಿ ಬಿದ್ದ ನೂರಕ್ಕೂ ಹೆಚ್ಚು ಜನರು ಸಜೀವವಾಗಿ ದಹಿಸಿ ಹೋಗಿರುವ ಘಟನೆ ಪಶ್ಚಿಮ ಆಫ್ರಿಕಾದ ಫ್ರೀಟೌನ್‌ನಲ್ಲಿ ನಡೆದಿದೆ.

ಟ್ಯಾಂಕರ್ ಪಲ್ಟಿಯಾದ ತಕ್ಷಣ ತೈಲವನ್ನು ಸಂಗ್ರಹಿಸಲು ಜನರು ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಟ್ಯಾಂಕರ್ ಸ್ಫೋಟವಾಗಿದೆ. ಆಗ ಅಲ್ಲಿ ತೈಲ ಸಂಗ್ರಹಿಸುತ್ತಿರುವವರೆಲ್ಲರೂ ಸುಟ್ಟು ಬೂದಿಯಾಗಿದ್ದಾರೆ. 100ಕ್ಕೂ ಅಧಿಕ ಮಂದಿ ಅಲ್ಲಿ ಸೇರಿದ್ದರಿಂದ ಸಾವಿನ ಸರಿಯಾದ ಸಂಖ್ಯೆ ಇನ್ನೂ ನಿಖರವಾಗಿ ತಿಳಿದಿಲ್ಲ.

ಫ್ರೀಟೌನ್‌ನ ಪೂರ್ವದ ಉಪನಗರವಾದ ವೆಲ್ಲಿಂಗ್‌ಟನ್‌ನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹಲವರು ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ.

Leave A Reply

Your email address will not be published.