ಸಾವಿನಲ್ಲೂ ಸಾರ್ಥಕತೆ ಮೆರೆದ ದ್ರುವತಾರೆ ಪುನೀತ್ ರಾಜ್ ಕುಮಾರ್.ನಾಲ್ವರು ಅಂಧರ ಬಾಳಿಗೆ ಬೆಳಕಾದ ಪುಣ್ಯವಂತ.

ನೇತ್ರ ಧಾನ ಮಹಾದಾನ ಎನ್ನಲಾಗುತ್ತದೆ. ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಹೃದಯ ಸ್ತಂಭನದಿಂದ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಜೀವಂತ ಇರುವಾಗ ಹಲವಾರು ರೀತಿಯ ದಾನವನ್ನು ಮಾಡಿದ್ದಾರೆ.ಆದರೆ ಸತ್ತ ಮೇಲೂ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ಪುನೀತ್ ಅವರ ಕಣ್ಣು ನಾಲ್ವರ ಅಂಧಕಾರವನ್ನು ದೂರ ಮಾಡಿದೆ.

ಪುನೀತ್ ರಾಜ್ ಕುಮಾರ್ ಅವರ ಕಣ್ಣನ್ನು ನಾಲ್ವರಿಗೆ ಅಳವಡಿಸಿದ್ದೇವೆ ಎಂದು ನಾರಾಯಣ ನೇತ್ರಾಲಯ ಡಾ. ಭುಜಂಗಶೆಟ್ಟಿ ಅವರು ಹೇಳಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣ ನೇತ್ರಾಲಯ ಡಾ.ಭುಜಂಗಶೆಟ್ಟಿ ಅವರು, ರಾಜ್ ಕುಮಾರ್ ಕುಟುಂಬದವರಿಗೆ ವಂದನೆ ಹೇಳೋಕೆ ಬಯಸುತ್ತೇನೆ. ಮೊದಲಿಗೆ ರಾಜ್‍ಕುಮಾರ್ ಅವರು ಬಂದು ನೇತ್ರಾದಾನ ಶುರು ಮಾಡಿದರು. ಬಳಿಕ ಪಾರ್ವತಮ್ಮನವರು, ಇದೀಗ ಪುನೀತ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಶನಿವಾರವೇ ಅಪರೇಷನ್ ಮಾಡಿ ಪುನೀತ್ ಅವರ ಕಣ್ಣನ್ನು ಬೇರೆಯವರಿಗೆ ನೀಡಿದ್ದೇವೆ. ಸಾಮಾನ್ಯವಾಗಿ ಕಣ್ಣುದಾನ ಮಾಡಿದರೆ ಇಬ್ಬರಿಗೆ ಕೊಡುತ್ತೇವೆ. ಆದರೆ ಅಪ್ಪು ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಿದ್ದೇವೆ. ಕರ್ನಿಯಾದ ಮುಂಭಾಗ ಮತ್ತು ಹಿಂಭಾಗದ ಪದರವನ್ನು ಎರಡು ಭಾಗವಾಗಿ ಮಾಡಿ ನಾಲ್ಕು ಜನರಿಗೆ ಕೊಟ್ಟಿದ್ದೇವೆ. ಅಂದರೆ ಕಣ್ಣಿನ ಮುಂದಿನ ಭಾಗ ಮತ್ತು ಬ್ಯಾಕ್ ಪೋಷನ್ ಬೇರ್ಪಡಿಸಿ ಅವಶ್ಯಕತೆ ಇರುವ ನಾಲ್ವರಿಗೆ ಕೊಟ್ಟಿದ್ದೇವೆ. ಒಬ್ಬರ ಕಣ್ಣನ್ನು ಒಂದೇ ದಿನ, ನಾಲ್ವರಿಗೆ ಕೊಟ್ಟಿರುವುದು ಇದೇ ಮೊದಲಾಗಿದೆ. ನಾಲ್ವರು ಇದೀಗ ತುಂಬಾ ಚೆನ್ನಾಗಿದ್ದಾರೆ. ಇದಕ್ಕೆ ಕಣ್ಣು ತುಂಬಾ ಚೆನ್ನಾಗಿ ಇರಬೇಕಾಗುತ್ತದೆ. ಪುನೀತ್ ಕಣ್ಣು ತುಂಬಾ ಚೆನ್ನಾಗಿದ್ದ ಕಾರಣ ಇದನ್ನು ನಾಲ್ವರಿಗೆ ನೀಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಐದು ಜನರ ತಂಡದ ಡಾಕ್ಟರ್‌ಗಳು ಆಪರೇಷನ್ ಅನ್ನು ಮಾಡಿದ್ದಾರೆ. ಈ ಮೊದಲು ಈ ರೀತಿಯ ಆಪರೇಷನ್ ಅನ್ನು ಬೇರೆ, ಬೇರೆ ದಿನ ಮಾಡಲಾಗುತ್ತಿತ್ತು. ಆದರೆ ಅಪ್ಪು ಕಣ್ಣಿಗೆ ಪೂರಕವಾದ ನಾಲ್ವರ ಕಣ್ಣುಗಳಿಗೆ ಮ್ಯಾಚ್ ಆಗಬೇಕು. ಇದೀಗ ಒಬ್ಬ ಯುವತಿ, ಮೂವರು ಯುವಕರಿಗೆ ಅಪ್ಪು ಕಣ್ಣು ನೀಡಲಾಗಿದೆ. ಬೆಳಗ್ಗೆ ಹನ್ನೊಂದು ಗಂಟೆಯಿಂದ ಸಂಜೆ ಆರು ಗಂಟೆ ತನಕ ಆಪರೇಷನ್ ಮಾಡಲಾಗಿದೆ ಎಂದು ಹೇಳಿದ್ದಾರೆ

ಈ ರೀತಿಯಾಗಿ ಶ್ರೀಮಂತ ನಾಗಿ ಹುಟ್ಟಿ, ಶ್ರೀಮಂತ ನಾಗಿ ಬೆಳೆದು ,ನೇತ್ರದಾನ ಮಾಡುವ ಮೂಲಕ ಶ್ರೀಮಂತನಾಗಿ ಮರಣ ಹೊಂದಿದ್ದಾರೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು.ಅವರು ಮಾಡಿದ ಸಾಧನೆ ಎಂದಿಗೂ ಮರೆಯಲಾಗದಂತದ್ದು.

Leave A Reply

Your email address will not be published.