ಬೆಳ್ತಂಗಡಿ| ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ವಿರುದ್ಧ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲು
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣವೊಂದು ದಾಖಲಾಗಿದೆ.
ಆರೋಪಿ ಬೆಳ್ತಂಗಡಿ ತಾಲೂಕಿನ ಮದ್ದಡ್ಕ ನಿವಾಸಿ ದಿಲೀಪ್ ಮದ್ದಡ್ಕ ಎಂದು ತಿಳಿದುಬಂದಿದೆ.
ಈತ ಸಮೀಪದ ಸರಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಪರಿಚಿತನಾಗಿದ್ದ. ಅಪ್ರಾಪ್ತ ಬಾಲಕಿಯ ಬಳಿಯಿದ್ದ ಆನ್ಲೈನ್ ಕ್ಲಾಸ್ಗೆ ಉಪಯೋಗಿಸುತ್ತಿದ್ದ ಮೊಬೈಲ್ ಫೋನ್ ನಂಬ್ರವನ್ನು ಪಡೆದುಕೊಂಡು ಮೊಬೈಲ್ ಮೂಲಕ ಕರೆಮಾಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಬೇಡದ ರೀತಿಯಲ್ಲಿ ಸಂದೇಶ ಮತ್ತು ವಾಟ್ಸಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.