ಅಂಗದೊಳಗೆ ಆಯ್ತು, ಈಗ ಲಂಗದೊಳಗೆ ಇಟ್ಟು ಡ್ರಗ್ಸ್ ಸಾಗಾಟ !!

ದೇಹದ ವಿವಿಧ ಭಾಗಗಳಲ್ಲಿ ಡ್ರಗ್ಸ್ ಗಳನ್ನು ಬಚ್ಚಿಟ್ಟುಕೊಂಡು ಸಾಗಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್ ಗಳು ಇದೀಗ ದೇಹದ ಅಂಗ ಬಿಟ್ಟು ಲಂಗದ ಮೊರೆಹೋಗಿದ್ದಾರೆ. ಹೌದು, ಲೆಹೆಂಗಾದ ಫಾಲ್ಸ್ ಲೈನ್‍ನಲ್ಲಿ ಡ್ರಗ್ಸ್ ಇಟ್ಟು ಆಸ್ಟ್ರೇಲಿಯಾಗೆ ಪಾರ್ಸಲ್ ಮಾಡ್ತಿದ್ದ ಖತರ್ನಾಕ್ ಡ್ರಗ್ ಪೆಡ್ಲರ್‍ನನ್ನ ಬೆಂಗಳೂರು ಎನ್‍ಸಿಬಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ.

Ad Widget

ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ಹೈದರಾಬಾದ್‍ಗೆ ಡ್ರಗ್ಸ್ ಸಾಗಿಸಲಾಗುತ್ತಿತ್ತು. ಹೈದ್ರಾಬಾದ್‍ನಿಂದ ಆಸ್ಟ್ರೇಲಿಯಾಗೆ ಈ ಡ್ರಗ್ಸ್ ರೀಚ್ ಆಗಬೇಕಿತ್ತು. ಮಾಲ್ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್‍ಸಿಬಿ ಪೊಲೀಸರು ದೇವನಹಳ್ಳಿ ಟೋಲ್ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಲೆಹೆಂಗಾಗಳಲ್ಲಿ ಇರಿಸಲಾಗಿದ್ದ ಸ್ಯೂಡೋಫೆಡ್ರಿನ್ ಎಂಬ ಸುಮಾರು 3 ಕೆಜಿ ಬಿಳಿ ಬಣ್ಣದ ಹರಳಿನ ರೂಪದಲ್ಲಿರುವ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

Ad Widget . . Ad Widget . Ad Widget .
Ad Widget

ಇನ್ನು ಈ ಡ್ರಗ್ಸ್ ಚೆನ್ನೈನಿಂದ ಬೆಂಗಳೂರಿಗೆ ರವಾನಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಅದೇನೇ ಇರಲಿ ಉದ್ಯಾನನಗರಿ, ಸಿಲಿಕಾನ್ ಸಿಟಿ ಅಂತಾ ಕರೆಸಿಕೊಳ್ಳುವ ನಮ್ಮ ಬೆಂಗಳೂರಿನಿಂದಲೇ ಬೇರೆ ಬೇರೆ ಕಡೆ ಡ್ರಗ್ಸ್ ಸಪ್ಲೈ ಆಗ್ತಿರೋದು ವಿಪರ್ಯಾಸವೇ ಸರಿ.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: