ಪ್ರತೀದಿನ ಜಿಮ್ ಮಾಡುವ ಯುವಕರೇ ಎಚ್ಚರ!!?ಅತಿಯಾದ ವ್ಯಾಯಾಮ, ಪ್ರೊಟೀನ್ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ
ಇತ್ತೀಚಿನ ದಿನಗಳಲ್ಲಿ ಯುವಕರು ಜಿಮ್ ಮಾಡಿ ಕಟು ಮಸ್ತಾಗಿ ಬಾಡಿ ಮೇಂಟೈನ್ ಮಾಡುವುದು ಒಂದು ಶೋ ಜೊತೆಗೆ ದೇಹದ ಆರೋಗ್ಯಕ್ಕೂ ಉತ್ತಮ ವ್ಯಾಯಾಮ ಎಂದು ಭಾವಿಸಿದ್ದಾರೆ. ಆದರೆ ಅದೇ ಜಿಮ್ ಇಲ್ಲೊಬ್ಬ ಯುವಕನ ಆರೋಗ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟುಮಾಡಿದೆ.
ಜಿಮ್ ನಲ್ಲಿ ವ್ಯಾಯಾಮ ಜೊತೆಗೆ ದೇಹದ ವಿವಿಧ ಭಾಗಗಳಿಗೆ ಹೆಚ್ಚಿನ ಶೇಪ್ ಕೊಡುವುದರ ಸಲುವಾಗಿ ನಡೆಸುವ ಅತಿರೇಕದ ವ್ಯಾಯಾಮ ಹಾಗೂ ಪ್ರೊಟೀನ್ ಶೇಕ್, ಸ್ಟಿರಾಯ್ಡ್.ಉತ್ತಮ ಬಾಡಿ ಇದೆ ಅರೋಗ್ಯ ಚೆನ್ನಾಗಿರಬಹುದೆಂದು ಭಾವಿಸಿದ ಯುವಕನ ಪತ್ನಿಗೆ ಈಗ ನಿರಾಸೆಯಾಗಿದೆ. ಆತನ ದೇಹದಲ್ಲಿ ಸ್ಟಿರಾಯ್ಡ್ ಹಾಗೂ ಪ್ರೊಟೀನ್ ನ ಪ್ರಮಾಣ ಹೆಚ್ಚಾಗಿ ದೇಹದಲ್ಲಿ ಉತ್ಪತ್ತಿಯಾಗುವ ವೀರ್ಯದಲ್ಲಿ ವೀರ್ಯಾಣುವೇ ಇಲ್ಲವೆಂಬುವುದು ವೈದ್ಯರ ತಪಾಸಣೆಯ ಬಳಿಕ ಗೊತ್ತಾಗಿದೆ.ಇದರಿಂದಾಗಿ ಆತ ತಂದೆಯಾಗುವ ಭಾಗ್ಯವನ್ನೇ ಕಳೆದುಕೊಂಡಂತಾಗಿದೆ.
ದೇಹಕ್ಕೆ ನೀಡಿದ ಅತಿಯಾದ ವ್ಯಾಯಾಮದಿಂದ ಅಣು ಉತ್ಪತ್ತಿಯ ಮೇಲೆ ಅಡ್ಡ ಪರಿಣಾಮ ಬೀಳುವುದರಿಂದ ಆ ಯುವಕನಿಗೆ ಕೆಲ ಸಮಯಗಳ ಕಾಲ ಯಾವುದೇ ಪ್ರೊಟೀನ್ ಇನ್ನಿತರ ವಸ್ತುಗಳ ಸೇವನೆ ಮಾಡದಿರಲು ವೈದ್ಯರು ಸೂಚಿಸಿದ್ದು ಹೆಚ್ಚು ಬೊಜ್ಜು ಸಹಿತ ಅತಿಯಾದ ತೂಕವಿದ್ದರೂ ಇಂತಹ ಪರಿಣಾಮವಾಗುತ್ತದೆ.