ವಿವಾಹದ ಮುನ್ನ ದಿಬ್ಬಣದಲ್ಲಿ ಬರುತ್ತಿದ್ದ ವರನಿಗೆ ಫ್ಲೈಯಿಂಗ್ ಕಿಸ್ ನೀಡಿದ ವಧು | ವಿಡಿಯೋ ವೈರಲ್

ವಿವಾಹ ಪ್ರತಿಯೊಬ್ಬರ ಜೀವನದಲ್ಲಿಯೂ ತಿರುವಿನ ಹಾದಿ. ಮದುವೆ ನಿಶ್ಚಿಯವಾದ ಪ್ರತಿ ಜೋಡಿಯು ಸಪ್ತಪದಿ ತುಳಿಯುವ ಆ ದಿನಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಇದು ಕೂಡ ಅಂತಹದೇ ದೃಶ್ಯ. ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಇನ್ನೇನು ಒಂದು ಗಂಟೆಯಲ್ಲಿ ಮದುವೆ ನಡೆಯಲಿದೆ. ಆದರೆ ವಧುವಿಗೆ ವರನನ್ನು ನೋಡುವ ಆಸೆಯಾಗಿದೆ. ಹಾಗಾಗಿ ದಿಬ್ಬಣಿಗರೊಂದಿಗೆ ಬರುವ ವರನನ್ನು ನೋಡಲು ವಧು ಬಾಲ್ಕನಿಗೆ ಬಂದು ನಿಂತುಕೊಳ್ಳುವ ದೃಶ್ಯ ಇದು.

ಕುದುರೆಯೇರಿ ದಿಬ್ಬಣದ ಮೂಲಕ ವಿವಾಹ ಮಂಟಪಕ್ಕೆ ಹೊರಟಿರುವ ವರನನ್ನು ನೋಡಲು ವಧು ಬಾಲ್ಕನಿಗೆ ಬಂದು ನಿಂತಲ್ಲಿನಿಂದ ವಿಡಿಯೋ ಕ್ಲಿಪ್ ಆರಂಭವಾಗುತ್ತದೆ. ವರನನ್ನು ಕರೆಯುವಂತೆ ವರನ ಪಕ್ಕದಲ್ಲಿ ಇರುವವರಿಗೆ ಸೂಚಿಸುತ್ತಾಳೆ. ವರ ಆಕೆಯನ್ನು ನೋಡುತ್ತಿದ್ದಂತೆಯೇ ಕೈ ಬೀಸಿ ಹಾಯ್ ಮಾಡುತ್ತಾಳೆ. ಫ್ಲೈಯಿಂಗ್ ಕಿಸ್ ನೀಡಿ ತನ್ನ ಪ್ರೀತಿ ಹೊರಹಾಕುತ್ತಾಳೆ.

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

witty_wedding ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ದೃಶ್ಯ ಶೇರ್ ಆಗಿದೆ. ನೆಟ್ಟಿಗರ ಮನ ತಟ್ಟುವಲ್ಲಿ ಈ ದೃಶ್ಯ ಯಶಸ್ವಿಯಾಗಿದೆ.

Leave a Reply

error: Content is protected !!
Scroll to Top
%d bloggers like this: