ಮಂಗಳೂರು | ಲಾಡ್ಜ್ ನಲ್ಲಿ ತಂಗಿದ್ದ ಅನ್ಯಧರ್ಮದ ಜೋಡಿಗೆ ಎಚ್ಚರಿಕೆ ನೀಡಿ, ಪೊಲೀಸರಿಗೊಪ್ಪಿಸಿದ ಬಜರಂಗದಳದ ಕಾರ್ಯಕರ್ತರು

Share the Article

ಹೋಟೆಲ್ ಒಂದರ ಮೇಲೆ ದಾಳಿ ಮಾಡಿದ ಬಜರಂಗದಳದ ಕಾರ್ಯಕರ್ತರು ಅಲ್ಲಿ ತಂಗಿದ್ದ ಅನ್ಯ ಧರ್ಮಕ್ಕೆ ಸೇರಿದ ಯುವಕ ಯುವತಿಯರಿಬ್ಬರಿಗೆ ಬುದ್ಧಿವಾದ ಹೇಳಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ವಿಜಯಪುರದ ಹಿಂದು ಯುವತಿ ಹಾಗೂ ಹಾವೇರಿಯ ಮುಸ್ಲಿಂ ಯುವಕ ಇಬ್ಬರು ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಬಜರಂಗದಳದ ಕಾರ್ಯಕರ್ತರು ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ಅದಲ್ಲದೇ ಅವರಿಗೆ ಈ ಬಗ್ಗೆ ಎಚ್ಚರಿಕೆ ನೀಡಿ ಪೊಲೀಸರಿಗೊಪ್ಪಿಸಿದ್ದಾರೆ.

ಯುವಕ-ಯುವತಿಯನ್ನು ಮಂಗಳೂರಿನ ಬಂದರು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಯುವಕ ಯುವತಿಯರಿಬ್ಬರು ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಪರಿಚಯಗೊಂಡಿದ್ದರು ಎನ್ನಲಾಗಿದೆ.

Leave A Reply