ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಹಳೆ ಫೋಟೋ ನೋಡಿ ಬೇಜಾರಾಗಿದೆಯೇ?? | ಹೊಸ ಫೋಟೋ ಅಪ್ಡೇಟ್ ಮಾಡುವುದು ಹೇಗೆಂಬುದನ್ನು ತಿಳಿದುಕೊಳ್ಳೋಣ ಬನ್ನಿ

ಸರ್ಕಾರಿ ಅಥವಾ ಖಾಸಾಗಿ ಯಾವುದೇ ಕ್ಷೇತ್ರವಿರಲಿ ಆಧಾರ್ ಕಾರ್ಡ್‌ ಇಲ್ಲದಿದ್ದರೆ ಕೆಲಸವೇ ಆಗುವುದಿಲ್ಲ ಎಂಬ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಆಧಾರ್ ಕಾರ್ಡ್ ಇದು ಸರ್ಕಾರದಿಂದ ನೀಡಲಾಗುವ ಅತ್ಯಂತ ಮಹತ್ವದ ಗುರುತಿನ ಚೀಟಿಗಳಲ್ಲೊಂದಾಗಿದೆ. ಬ್ಯಾಂಕ್, ಏರಪೋರ್ಟ್, ಶಾಲೆ ಕಾಲೇಜು ಹೀಗೆ ಎಲ್ಲಿಯಾದರೂ ಇದನ್ನು ವ್ಯಕ್ತಿಯೊಬ್ಬರ ಖಾತರಿದಾಯಕವಾದ ಗುರುತಿನ ಚೀಟಿಯಾಗಿ ಮಾನ್ಯ ಮಾಡಲಾಗುತ್ತದೆ. ದೇಶದ ನಾಗರಿಕರಿಕನೊಬ್ಬನಿಗೆ ನೀಡಲಾದ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಆಧಾರ್ ಕಾರ್ಡ್ ಹೊಂದಿರುತ್ತದೆ. ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಆಧಾರ್ ಸಂಖ್ಯೆ, ಛಾಯಾಚಿತ್ರ ಮತ್ತು ಬಯೋಮೆಟ್ರಿಕ್ ಡೇಟಾದಂತಹ ಎಲ್ಲಾ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ.

ಆಧಾರ್ ಕಾರ್ಡ್ ಭಾರತದ ನಿವಾಸಿಯಾಗಿರುವ ಯಾವುದೇ ವಯಸ್ಸಿನ, ಯಾವುದೇ ವ್ಯಕ್ತಿ, ಯಾವುದೇ ಲಿಂಗ ತಾರತಮ್ಯವಿಲ್ಲದೆ ಆಧಾರ್ ಸಂಖ್ಯೆಯನ್ನು ಪಡೆಯಲು ದಾಖಲಾಗಬಹುದು. ಕೆಲವೊಮ್ಮೆ ಆಧಾರ್ ಕಾರ್ಡ್ ಹೊಂದಿರುವವರಿಗೆ ಆಧಾರ್ ಕಾರ್ಡ್ ನಲ್ಲಿ ಮುದ್ರಿಸಿದ ಛಾಯಾಚಿತ್ರವನ್ನು ಸಹ ಗುರುತಿಸಲಾಗುವುದಿಲ್ಲ. ಏಕೆಂದರೆ ಆ ಫೋಟೋಗಳು ಇದು ನಾವೇನಾ?? ಎಂದು ಹೇಳುವಂತೆ ಇರುತ್ತದೆ ಆ ಫೋಟೋಗಳು.

ಗುರುತು ಹಿಡಿಯಲು ಆಗದಂತಹ ಫೋಟೋನೇ ನಿಮ್ಮ ಆಧಾರ್ ನಲ್ಲೂ ಇದೆಯಾ?? ನೀವು ಫೋಟೋ ಅಪ್ಡೇಟ್ ಮಾಡಲು ಕಾಯುತ್ತಿದ್ದೀರಾ?? ಫೋಟೋ ಅಪ್ಡೇಟ್ ಹೇಗೆ ಮಾಡಬೇಕೆಂಬುದನ್ನು ತಿಳಿದುಕೊಳ್ಳೋಣ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಆಧಾರ್ ಕಾರ್ಡ್ ನಲ್ಲಿ ಈ ರೀತಿ ಹೊಸ ಫೋಟೋ ಅಪ್ಡೇಟ್ ಮಾಡಿ

*ಆಧಾರ್ ವೆಬ್‌ಸೈಟ್‌ಗೆ ಲಾಗಿನ್ ಮಾಡಿ.
*ಆಧಾರ್ ಕಾರ್ಡ್ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದರ ಮೇಲೆ ಆಧಾರ್ ಸಂಖ್ಯೆಯನ್ನು ಬರೆಯಿರಿ.
*ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.
*ನಿಮ್ಮ ಫಾರ್ಮ್ ಅನ್ನು ಅಲ್ಲಿ ಸಲ್ಲಿಸಿ.
*ನೀವು ಮತದಾರರ ಗುರುತಿನ ಚೀಟಿ ಪಾನ್ ಕಾರ್ಡ್, ಪಾಸ್‌ಪೋರ್ಟ್, ಪಡಿತರ ಚೀಟಿ, ಚಾಲನಾ ಪರವಾನಗಿ ಇತ್ಯಾದಿ ಯಾವುದೇ ಗುರುತಿನ ದಾಖಲೆಯನ್ನು ಹೊಂದಿರಬೇಕು.
*ನಿಮ್ಮೊಂದಿಗೆ ಆಧಾರ್ ಕಾರ್ಡ್ ಅನ್ನು ಆಧಾರ್ ಕೇಂದ್ರಕ್ಕೆ ಒಯ್ದಿರಿ.
*ದಾಖಲಾತಿ ಕೇಂದ್ರದ ಸಿಬ್ಬಂದಿ ಆಧಾರ್ ಕಾರ್ಡ್ ಹೊಂದಿರುವವರ ಛಾಯಾಚಿತ್ರ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುತ್ತಾರೆ.
*ನಂತರ ನಿಮ್ಮ URN ಹೊಂದಿರುವ ಸ್ವೀಕೃತಿ ಸ್ಲಿಪ್ ಅನ್ನು ನೀವು ಸ್ವೀಕರಿಸುತ್ತೀರಿ.
*ಆಧಾರ್ ಸ್ಥಿತಿಯನ್ನು ಪರೀಕ್ಷಿಸಲು URN ಬಳಸಿ.
*ಎಲ್ಲಾ ಮಾಹಿತಿಯನ್ನು ನವೀಕರಿಸಲು ಬೆಂಗಳೂರು ಕೇಂದ್ರವನ್ನು ತಲುಪುತ್ತದೆ.
*ಎರಡು ವಾರಗಳಲ್ಲಿ ಫೋಟೋ ಅಪ್ಡೇಟ್ ಆಗಿ ನಿಮ್ಮ ನೋಂದಾಯಿತ ವಿಳಾಸವನ್ನು ಆಧಾರ್ ಕಾರ್ಡ್ ತಲುಪುತ್ತದೆ.

ನೀವು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಲು ಬಯಸಿದರೆ ನೀವು ಅದನ್ನು ಸುಲಭವಾಗಿ ಮಾಡಬಹುದು. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ಯುಐಡಿಎಐ ಆಧಾರ್ ಕಾರ್ಡ್ ಹೊಂದಿರುವವರಿಗೆ ಫೋಟೋಗಳನ್ನು ಅಪ್ಲೇಟ್ ಮಾಡಲು ಅವಕಾಶ ನೀಡುತ್ತದೆ. ಆದಾಗ್ಯೂ ನೀವು ಆನ್‌ಲೈನ್‌ನಲ್ಲಿ ವಿನಂತಿಯನ್ನು ಸಲ್ಲಿಸಬೇಕು ಮತ್ತು ನಂತರ ಹತ್ತಿರದ ಆಧಾರ್ ಕಾರ್ಡ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಈ ಸರಳ ಹಂತಗಳನ್ನು ಅನುಸರಿಸಿ. ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಆನ್‌ಲೈನ್‌ನಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಈ ಪ್ರಕ್ರಿಯೆಯು ಆಧಾರ್ ಕೇಂದ್ರದಲ್ಲಿ ಬದಲಾವಣೆಗೆ ಮಾತ್ರ ಲಭ್ಯವಿದೆ.

Leave a Reply

error: Content is protected !!
Scroll to Top
%d bloggers like this: