ಕಡಬ:ಇಲ್ಲಿನ ರೆಂಜಿಲಾಡಿಯ ಹಾಲು ಉತ್ಪಾದಕರ ಸಂಘದ ಪೇರಡ್ಕ ಹಾಲು ಖರೀದಿ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾದ ಘಟನೆ ಇಂದು ಮುಂಜಾನೆ ನಡೆದಿದೆ.
ಗುರುವಾರ ರಾತ್ರಿ ಕಡಬ ,ರೆಂಜಿಲಾಡಿ ಸೇರಿದಂತೆ ಹಲವೆಡೆ ಸಿಡಿಲು ಸಹಿತ ಭಾರಿ ಮಳೆಯಾಗಿದ್ದು,ಸಿಡಿಲು ಬಡಿದು ವಿದ್ಯುತ್ ಪರಿಕರಕ್ಕೆ ಬೆಂಕಿ ಹಿಡಿದಿರುವ ಸಾಧ್ಯತೆಯೂ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಂಪ್ಯೂಟರ್ ಹಾಗೂ ಇತರ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿದೆ .
ರಾತ್ರಿ ಬೆಂಕಿ ಹತ್ತಿಕೊಂಡಿರಬಹುದೆಂದು ಅಂದಾಜಿಸಲಾಗಿದ್ದು ಬೆಳಿಗ್ಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿಗಳು ಹಾಗೂ ಹಾಲು ನೀಡಲು ಬಂದವರು ಬೆಂಕಿಯನ್ನು ನಂದಿಸಿದ್ದಾರೆ.
You must log in to post a comment.