ಅ.25 ರಿಂದ 1ರಿಂದ 5ನೇ ತರಗತಿಯ ಶಾಲೆ ಆರಂಭಕ್ಕೆ ಸರಕಾರ ನಿರ್ಧಾರ
ಬೆಂಗಳೂರು: ಕೊವಿಡ್ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ರಾಜ್ಯ ಸರಕಾರ, 1ರಿಂದ 5ನೇ ತರಗತಿ ವರೆಗೆ ಅ.25ರಿಂದ ಶಾಲೆ ಆರಂಭಿಸಲು ನಿರ್ಧರಿಸಿದೆ.
ದಸರಾ ಬಳಿಕ 1ರಿಂದ 5ನೇ ತರಗತಿ ಆರಂಭಿಸುವುದಾಗಿ ಸರಕಾರ ತಿಳಿಸಿತ್ತು. ಇದೀಗ 1ರಿಂದ 5ನೇ ತರಗತಿವರೆಗೆ ಶಾಲೆ ಆರಂಭಕ್ಕೆ ತಜ್ಞರ ಸಮ್ಮತಿ ಒಪ್ಪಿಗೆ ನೀಡಿರುವ ಹಿನ್ನೆಲೆ ಮಾರ್ಗಸೂಚಿ ಹೊರಡಿಸಿರುವ ಸರಕಾರ ಶಾಲಾರಂಭಕ್ಕೆ ನಿರ್ಧರಿಸಿದೆ.
ಮಾರ್ಗಸೂಚಿ : ತರಗತಿಯಲ್ಲಿ ಶೇಕಡಾ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ನೀಡಿ ಸದ್ಯ ಶಾಲೆ ತೆರೆಯಲಾಗುವುದು. ಮಕ್ಕಳನ್ನ ಶಾಲೆಗೆ ಕಳಿಸಲು ಪೋಷಕರ ಅನುಮತಿ ಕಡ್ಡಾಯ ಎಂದು ತಿಳಿಸಲಾಗಿದೆ.
ಶಿಕ್ಷಕರು ಕಡ್ಡಾಯವಾಗಿ 2 ಡೋಸ್ ಲಸಕೆ ಪಡೆದಿರಬೇಕು.ತರಗತಿಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ.
ಜಾಲ್ಸೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ,ನಜ್ಜುಗುಜ್ಜಾದ ಕಾರು,ಪ್ರಯಾಣಿಕರಿಗೆ ಗಾಯ
ಬಡಗನ್ನೂರು : ಪಾದೆಕರ್ಯದಲ್ಲಿ ಸುಬ್ರಹ್ಮಣ್ಯ ಭಟ್,ಶಾರದಾ ದಂಪತಿಗಳು ನೇಣು ಬಿಗಿದು ಆತ್ಮಹತ್ಯೆ