ಬಡಗನ್ನೂರು : ಪಾದೆಕರ್ಯದಲ್ಲಿ ಸುಬ್ರಹ್ಮಣ್ಯ ಭಟ್,ಶಾರದಾ ದಂಪತಿಗಳು ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಬಡಗನ್ನೂರು ಗ್ರಾಮದ ಪಾದೆಕರ್ಯ ನಿವಾಸಿ ಸುಬ್ರಹ್ಮಣ್ಯ ಭಟ್, ಶಾರದಾ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.18 ರಂದು ನಡೆದಿತ್ತು.

ಪಾದೆಕರ್ಯ ಕೃಷಿಕರಾಗಿರುವ ಸುಬ್ರಹ್ಮಣ್ಯ ಭಟ್ -ಶಾರದಾ ದಂಪತಿ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು

ಬಡಗನ್ನೂರು ಗ್ರಾಮದ ಪಾದೆಕರ್ಯ ಎಂಬಲ್ಲಿಯ ಕೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಸುಬ್ರಹ್ಮಣ್ಯ ಭಟ್ ಮತ್ತು ಅವರ ಪತ್ನಿ ಶಾರದಾರವರು ಅ.17ರಂದು ರಾತ್ರಿ ಸುಮಾರು 10 ಗಂಟೆಗೆ ಊಟ ಮುಗಿಸಿ ಮಲಗಿದ್ದರು. ಮೃತರ ಪುತ್ರ ನಾಗೇಶ್ ಭಟ್ ಮತ್ತು ಅವರ ಹೆಂಡತಿ ಮಕ್ಕಳು ಮನೆಯ ಮಹಡಿ ಕೋಣೆಯಲ್ಲಿ ಮಲಗಿದ್ದರು. ಕೆಳಗಿನ ಕೋಣೆಯಲ್ಲಿ ಮಲಗಿದ್ದ ಸುಬ್ರಹ್ಮಣ್ಯ ಭಟ್ ಮತ್ತು ಶಾರದಾರವರು ಅ.18ರಂದು ಬೆಳಿಗ್ಗೆ 6ಗಂಟೆಯಾದರೂ ಎದ್ದಿರಲಿಲ್ಲ. ಮೃತರ ಸೊಸೆ ಹೋಗಿ ನೋಡಿದಾಗ ಶಾರದಾರವರು ಕುತ್ತಿಗೆಗೆ ಫ್ಯಾನಿಗೆ ನೈಲಾನ್ ಹಗ್ಗ ಕಟ್ಟಿ, ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿ ನೇತಾಡುತ್ತಿರುವುದು ಕಂಡು ಬಂದಿತ್ತು.

ಪತ್ನಿಯಿಂದ ಈ ವಿಚಾರ ತಿಳಿದ ನಾಗೇಶ್ ಭಟ್‌ರವರು ಬಂದು ನೋಡಿದಾಗ ಸಮಯದಲ್ಲಿ ಸುಬ್ರಹ್ಮಣ್ಯ ಭಟ್‌ರವರು ಕಂಡು ಬಾರದ ಹಿನ್ನೆಲೆಯಲ್ಲಿ ಅವರನ್ನು ಹುಡುಕಿದಾಗ ಮನೆಯ ಇನ್ನೊಂದು ಕೋಣೆಯಲ್ಲಿ ಫ್ಯಾನಿನ ಹಗ್ಗ ಕಟ್ಟಿ ಕುಣಿಕೆ ಮಾಡಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು.

ಶಾರದಾರವರು ಸಕ್ಕರೆ ಖಾಯಿಲೆ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು ಇದರಿಂದ ನೊಂದಿದ್ದ ಸತಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಸು ದಾಖಲಿಸಿಕೊಳ್ಳಲಾಗಿದೆ. ಮೃತರು ಪುತ್ರರಾದ ನಾಗೇಶ್, ವಿಶ್ವೇಶ್ವರ, ಗಣೇಶ್ ಕುಮಾರ್, ಪುತ್ರಿಯರಾದ ಶ್ರೀದೇವಿ, ಶಕುಂತಳಾ, ಯಶೋದಾ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

error: Content is protected !!
Scroll to Top
%d bloggers like this: