ಕಂಪನಿಯಲ್ಲಿ ಕೆಲಸ ಮಾಡುವ ಮಹಿಳಾ ಸಿಬಂದ್ದಿಗೆ ಸಿಗಲಿದೆ ಲವ್ ಲೀವ್. ಇನಿದು ಲವ್ ಲೀವ್ ಇಲ್ಲಿದೆ ನೋಡಿ ಮಾಹಿತಿ.
ಆಫೀಸಿನಲ್ಲಿ ಸಿಕ್ ಲೀವ್ ಸೇರಿ ಅನೇಕ ಲೀವ್ಗಳನ್ನ ಕೇಳಿದ್ದೀರಾ. ಕೆಲವು ಬಾರಿ ಆರೋಗ್ಯವಾಗಿದ್ದರೂ, ಸುಮ್ಮನೆ ಸಿಕ್ ಲೀವ್ ಪಡೆದು ಬೇರೆ ಕೆಲಸಕ್ಕೆ ಉಪಯೋಗ ಮಾಡಿರುತ್ತೀರಾ. ಆದರೆ ನಿಮಗೆ ಪ್ರೀತಿ ಮಾಡುವುದಕ್ಕೂ ರಜೆ ಸಿಗುತ್ತೆ ಅಂತ ನಿಮಗೆ ತಿಳಿದಿದೆಯಾ?
ಚೀನಾದಲ್ಲಿ ಹೆಚ್ಚಿನ ಮಹಿಳೆಯರು ಮದುವೆಯಾಗಲು ನಿರಾಕರಿಸುತ್ತಾರೆ. ಯಾಕಂದರೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ಸಮಯ ಸಿಗುತ್ತಿಲ್ಲವಂತೆ. ಈ ಸಮಸ್ಯೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಅಲ್ಲಿನ ಕಚೇರಿಗಳಲ್ಲಿ ಮಹಿಳೆಯರಿಗೆ ರಜೆ ನೀಡಲು ವಿಶೇಷ ರೂಲ್ಸ್ವೊಂದನ್ನ ಆರಂಭಿಸಲಾಗಿದೆ.ಅವಿವಾಹಿತ ಮಹಿಳೆಯರಿಗೆ ತಿಂಗಳಿಗೆ ಒಂದು ಬಾರಿ ‘ಲವ್ ಲೀವ್’ ನೀಡುತ್ತಿದೆ. ರಜೆ ತೆಗೆದುಕೊಂಡು, ಅವರವರ ಸಂಗಾತಿಯೊಂದಿಗೆ ಟೈಮ್ ಸ್ಪೆಂಡ್ ಮಾಡಿ ಎಂದು ಚೀನಾದ ಕಂಪನಿಗಳು ಹೇಳುತ್ತಿವೆಯಂತೆ.ಈ ವಿಶೇಷವಾದ ಆಫರ್ ಅನ್ನು ಕಂಪನಿ ಮಹಿಳಾ ಸಿಬಂದ್ದಿಗೆ ನೀಡಲಾಗಿದೆ.
ಈ ಹೊಸ ವ್ಯವಸ್ಥೆ 2019ರಿಂದ ಚಾಲ್ತಿಯಲ್ಲಿದ್ಯಂತೆ. ಇಂದಿಗೂ ಮಹಿಳೆಯರು ಲವ್ ಲೀವ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಇದಕ್ಕೊಂದು ಷರತ್ತು ಇದೆ. ಅದು ಮಹಿಳಾ ಉದ್ಯೋಗಿಗೆ 30 ವರ್ಷಕ್ಕಿಂತ ವಯಸ್ಸು ಹೆಚ್ಚಿರಬೇಕು ಹಾಗೂ ಮದುವೆಯಾಗಿರಬಾರದು.
ಹೌದು, ಚೀನಾದ ಕೆಲ ಕಂಪನಿಗಳಲ್ಲಿ ತಿಂಗಳಿಗೊಮ್ಮೆ ಒಂದು ಬಾರಿ ಈ ರೀತಿಯ ಡೇಟಿಂಗ್ ಲೀವ್ ನೀಡಲಾಗುತ್ತಂತೆ. ಲೀವ್ ಪಡೆಯುವ ಹಿಂದಿನ ಆಫೀಸ್ನಿಂದ ಮುಂಚೆಯೇ ಅವರಿಗೆ ಮನೆಗೆ ಕಳುಹಿಸಲಾಗುತ್ತಂತೆ. ಕಳೆದ ಕೆಲವು ವರ್ಷಗಳಿಂದ ಚೀನಾದಲ್ಲಿ ಒಂಟಿಯಾಗಿರುವ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಕೆಲಸದ ಒತ್ತಡದ ನಡುವೆ ಮದುವೆಯಾಗುವುದನ್ನೇ ಮಹಿಳಾ ಉದ್ಯೋಗಿಗಳು ಮರೆಯುತ್ತಿದ್ದಾರಂತೆ. ಇಲ್ಲಿನ ಸರ್ಕಾರ ಕೂಡ ಮದುವೆಯಾಗಲು ಹಲವಾರು ಯೋಜನೆಗಳನ್ನ ತಂದಿದ್ಯಂತೆ. ಹೀಗಾಗಿ ಮಹಿಳೆಯರು ಈ ರಜೆಯನ್ನ ಪಡೆದು ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ಅವಕಾಶ ಮಾಡಿದೆ.
ಚೀನಾದಲ್ಲಿ ಶೀಘ್ರ ಜನಸಂಖ್ಯೆಯ ಕುಸಿತದಿಂದ ಮುಂದಿನ 50 ವರ್ಷಗಳಲ್ಲಿ 150 ದಶಲಕ್ಷದಿಂದ, 120 ದಶಲಕ್ಷಕ್ಕೆ ಇಳಿಯುತ್ತೆ ಅಂತ ವರದಿಯೊಂದು ಹೇಳಿದೆ. ಹೀಗಾಗಿ ಮಹಿಳೆಯರಿಗೆ ಈ ರಜೆ ನೀಡಿ ಮದುವೆಯಾಗಲು ಪ್ರಚೋದಿಸಿ ಮುಂದೆ ಮಕ್ಕಳು ಹೊಂದುವಂತೆ ಮಾಡುವುದು ಚೀನಾ ಸರ್ಕಾರದ ಉದ್ದೇಶವಾಗಿದೆ
.ಚೀನಾದಲ್ಲಿ ಶೀಘ್ರ ಜನಸಂಖ್ಯೆಯ ಕುಸಿತದಿಂದ ಮುಂದಿನ 50 ವರ್ಷಗಳಲ್ಲಿ 150 ದಶಲಕ್ಷದಿಂದ, 120 ದಶಲಕ್ಷಕ್ಕೆ ಇಳಿಯುತ್ತೆ ಅಂತ ವರದಿಯೊಂದು ಹೇಳಿದೆ. ಹೀಗಾಗಿ ಮಹಿಳೆಯರಿಗೆ ಈ ರಜೆ ನೀಡಿ ಮದುವೆಯಾಗಲು ಪ್ರಚೋದಿಸಿ ಮುಂದೆ ಮಕ್ಕಳು ಹೊಂದುವಂತೆ ಮಾಡುವುದು ಚೀನಾ ಸರ್ಕಾರದ ಉದ್ದೇಶವಾಗಿದೆ.
ಪ್ರೀತಿ ಯಾವಾಗ, ಯಾರಿಗೆ, ಎಲ್ಲಿ, ಹೇಗೆ ಆಗುತ್ತೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಈ ಲವ್ ಲೀವ್ ಪಡೆಯಲು ಹಿಂದಿನ ದಿನ ಅರ್ಜಿಸಲ್ಲಿಸಿದರು ಸಾಕಂತೆ.