ಕೇರಳ:ಮೊಬೈಲ್ ನಲ್ಲಿ ಪರಿಚಯವಾದ ಮಹಿಳೆಯನ್ನು ಭೇಟಿಯಾಗಲು 248 ಕೀಮೀ ಹೊರಟೇ ಬಿಟ್ಟ 68ರ ಮುದುಕ!! ಆಸೆಯಲ್ಲಿ ಹೋದ ಮುದುಕನ ಕಿಸೆ ಖಾಲಿಯಾದಾಗ ಪೊಲೀಸರೇ ಬರಬೇಕಾಯಿತು

Share the Article

ಗೆಳತಿಯೊಬ್ಬಳನ್ನು ಭೇಟಿಯಾಗಲು ತೆರಳಿದ 68 ವರ್ಷ ಪ್ರಾಯದ ಮುದುಕನೊಬ್ಬ ಬಂದ ದಾರಿಗೆ ಸುಂಕವಿಲ್ಲವೆಂಬತೆ ವಾಪಸ್ಸು ಮರಳಿದ ಘಟನೆ ಕೇರಳದಿಂದ ವರದಿಯಾಗಿದ್ದು, ಗೆಳತಿಯ ಭೇಟಿಗೆ ಆಟೋದಲ್ಲಿ ಅಲೆದಾಡಿ ಆಟೋ ಬಾಡಿಗೆ ಕೊಡಲು ಹಣವಿಲ್ಲದೆ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಅಜ್ಜನ ಒನ್ಸೈಡ್ ಲವ್ ಬೆಳಕಿಗೆ ಬಂದಿದೆ.

ಕೇರಳದ ತಿರುವನಂತಪುರಂ ವ್ಯಾಪಿನ್ ನಂಜಕಲ್ ಮೂಲದ 68 ವರ್ಷ ಪ್ರಾಯದ ಮುದುಕನಿಗೆ ಮೊಬೈಲ್ ಮೂಲಕ ಮಹಿಳೆಯೊಬ್ಬರ ಪರಿಚಯವಾಗಿದ್ದು, ಆಕೆಯನ್ನು ಕಾಣುವ ತವಕದಿಂದ ಮುದುಕ ಸುಮಾರು 248 ಕೀಮೀ ಸಂಚರಿಸಿ ಭೇಟಿಯಾಗಲು ಬಂದಾಗ ಆಕೆ ನಿರಾಕರಿಸಿದ್ದಾಳೆ. ಆಕೆಯ ಕಾಣಲು ಆಟೋದಲ್ಲಿ ಹೊರಟ ಮುದುಕ ಆಕೆ ಹೇಳಿದ ಜಾಗಕ್ಕೆ ಬಂದು ಕರೆಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಅದಾಗಲೇ ಮುದುಕನನ್ನು ಸುತ್ತಾಡಿಸಿ ಆಟೋ ಚಾಲಕನಿಗೆ ಮುದುಕನಲ್ಲಿ ಹಣವಿಲ್ಲ ಎಂದು ಗೊತ್ತಾಗಿತ್ತು. ಇದರಿಂದ ಕೋಪಗೊಂಡ ಆಟೋ ಚಾಲಕ ಸೀದಾ ಪೊಲೀಸ್ ಠಾಣೆಗೆ ತೆರಳಿದ್ದು ಅಲ್ಲಿ ಅಜ್ಜನ ಕಥೆ ಕೇಳಿ ಪೊಲೀಸರು ಕಂಗಾಲಾಗಿದ್ದರು.ಸ್ವತಃ ಪೊಲೀಸರೇ ಮಹಿಳೆಗೆ ಕರೆ ಮಾಡಿದಾಗ ಪರಿಚಯವಿರುವುದು ಹೌದು, ಭೇಟಿಯಾಗಲು ಇಷ್ಟವಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಗಂಡನನ್ನು ಕಳೆದುಕೊಂಡ ಮಹಿಳೆ ಹಾಗೂ ಹೆಂಡತಿಯನ್ನು ಕಳೆದುಕೊಂಡ ಮುದುಕ ಮಹಿಳೆಯ ಸಂಕಷ್ಟಕ್ಕೆ ಹೆಗಲಾಗಲು ತೆರಳಿ ತಾನೇ ಸಂಕಷ್ಟಕ್ಕೆ ಸಿಲುಕಿದ್ದರಿಂದ ಪೊಲೀಸರೇ ಆತನ ಟಿಕೆಟ್ ಬುಕ್ ಮಾಡಿ ಮನೆಗೆ ತಲುಪಿಸಿದ್ದಾರೆ.

Leave A Reply

Your email address will not be published.