ಪ್ರಾರ್ಥನೆ ನೆಪದಲ್ಲಿ ಮತಾಂತರ : ಚರ್ಚ್‌ಗೆ ನುಗ್ಗಿದ ಹಿಂದೂ ಸಂಘಟನೆ | ರೂವಾರಿ ಸೋಮಲಿಂಗ ಅವರಾದಿ ಬಂಧನ

Share the Article

ಹುಬ್ಬಳ್ಳಿ : ಕ್ರೈಸ್ತ ಸಮುದಾಯದವರಿಂದ ಮತಾಂತರ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭೈರಿದೇವರಕೊಪ್ಪದ ‘ಆಲ್ ಅಸೆಂಬ್ಲಿ ಆಫ್ ಗಾಡ್’ ಚರ್ಚ್‌ಗೆ ನುಗ್ಗಿದ ಘಟನೆ ಅ.17ರ ಭಾನುವಾರ ನಡೆದಿದೆ.

ಪ್ರಾರ್ಥನೆ ಹೆಸರಲ್ಲಿ ಹಿಂದೂಗಳನ್ನ ತಂದು ಮತಾಂತರ ಗೊಳಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆಕ್ರೋಷಗೊಂಡ ಹಿಂದೂ ಸಂಘಟನೆಗಳ ಕಾರ್ಯಕರ್ತರು ಚರ್ಚ್‌ ಹೊರಗಡೆ ಕುಳಿತು ಭಜನೆ ಮಾಡಲು ಆರಂಭಿಸಿದ್ದಾರೆ.

ಈ ವೇಳೆ ಚರ್ಚ್‌ನ ಪಾದ್ರಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ನವನಗರದ ಎಪಿಎಂಸಿ ಠಾಣೆ ಪೊಲೀಸರು ಆಗಮಿಸಿದ್ದಾರೆ.

ಮತಾಂತರಕ್ಕೆ ಪ್ರಚೋದನೆ ನೀಡಿದ ಸೋಮು ಅವರಾದಿಯನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸ್ ಠಾಣೆ ಆವರಣಕ್ಕೆ ಕರೆದುಕೊಂಡು ‌ಬಂದರೂ ಪೊಲೀಸರು‌ ಬಂಧಿಸಿಲ್ಲ. ತಕ್ಷಣವೇ ಬಂಧಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟು ಸಂಘಟನೆಯವರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ‌ಮುಂದುವರಿಸಿದ್ದಾರೆ.

ಪೊಲೀಸ್‌ ಠಾಣೆಯ ಸಮೀಪದಲ್ಲಿಯೇ ಆರೋಪಿ ಸೋಮು ಅವರ ಮೇಲೆ ಹಲ್ಲೆ ಮಾಡಲಾಗಿದೆ. ಬಳಿಕ ಅವರಿಂದ ತಪ್ಪಿಸಿಕೊಂಡ ಸೋಮು ಅವರು ಅಂಬುಲೆನ್ಸ್‌ ಹತ್ತಿ ಆಸ್ಪತ್ರೆಗೆ ತೆರಳಿದರು.

ರಾತ್ರಿ ವೇಳೆ ಸೋಮು ಅವರಾದಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಯಿತು.

Leave A Reply