50 ರುಪಾಯಿಯ ಸೀರೆ ಆಫರ್ ಇಟ್ಟು 5000 ಮಹಿಳೆಯರನ್ನ ಅಂಗಡಿ ಮುಂದೆ ಕರೆಸಿದ ಮಾಲಿಕ|ಆದ್ರೆ ಕೊನೆಗೆ ಆತನಿಗೆ ಸಿಕ್ಕಿದ್ದು ಮಾತ್ರ 10 ಸಾವಿರ ರೂ.ಯ ದಂಡ!!
ಮಹಿಳೆಯರಿಗೆ ಒಡವೆ ಬಟ್ಟೆ ಅಂದ್ರೇನೆ ಜೀವ. ಅದರಲ್ಲೂ ಸೀರೆ ಅಂದ್ರೆ ತುಸು ಹತ್ರವೇ ಸರಿ.ಅಷ್ಟು ಇಷ್ಟ ಪಡೋ ಸೀರೆನ 50 ರುಪಾಯಿಗೆ ಪಡೆಬಹುದು ಅಂದ್ರೆ ಯಾರ್ ತಾನೇ ಸುಮ್ಮನಿರುತ್ತಾರೆ ಹೇಳಿ. ಆದ್ರೆ ಮಹಿಳೆಯರನ್ನು ಮನವೊಲಿಸೋಕೆ ಹೋಗಿ ಅಂಗಡಿ ಮಾಲೀಕನಿಗೆ ಆದ ಪೆಟ್ಟು ಮಾತ್ರ ದುಪ್ಪಟ್ಟು.
ಹೌದು.ಪ್ರಚಾರ ಪ್ರಿಯತೆ ಹೇಗೆ ಎಡವಟ್ಟಾಗಬಹುದು ಎಂಬುದಕ್ಕೆ ಈ ವರದಿ ಅತ್ಯುತ್ತಮ ಉದಾಹರಣೆಯಾಗಬಹುದು.ಅಷ್ಟಕ್ಕೂ ಆಗಿದ್ದೇನು ಅಂತ ನೀವೇ ನೋಡಿ.ತಮಿಳುನಾಡಿನ ತೆಂಕಸಿಯ ಅಳಂಗುಳಂ ನಲ್ಲಿ ಟೆಕ್ಸ್ ಟೈಲ್ಸ್ ಮಳಿಗೆ ಮಾಲಿಕ 50 ರೂಪಾಯಿಗಳಿಗೆ ಸೀರೆ ನೀಡುವ ಆಫರ್ ನ್ನು ಘೋಷಿಸಿದ್ದರು.
ಇಷ್ಟು ಅಗ್ಗದ ದರದಲ್ಲಿ ಸೀರೆ ಸಿಗುತ್ತೆ ಅಂದರೆ ಕೇಳಬೇಕೆ? 5000 ನಾರಿಯರು ಟೆಕ್ಸ್ ಟೈಲ್ಸ್ ಮಳಿಗೆಯತ್ತ ಧಾವಿಸಿದ್ದರು. ಇದರೊಂದಿಗೆ ಸಾಮಾಜಿಕ ಅಂತರ, ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳೆಲ್ಲಾ ಗಾಳಿಗೆ ತೂರಲ್ಪಟ್ಟಿತು.ರಾಶಿ ರಾಶಿ ಮಹಿಳೆಯರ ಸಾಲೇ ಹರಿದಿತ್ತು.ಪೊಲೀಸ್ ಠಾಣೆಯಿಂದ 800 ಮೀಟರ್ ದೂರ ಹಾಗೂ ತಾಲೂಕು ಕಚೇರಿಯ ಎದುರುಗಡೆ ಇರುವ ಈ ಮಳಿಗೆಯಲ್ಲಿ ಮೊದಲು ಬಂದ 3,000 ಮಂದಿ ಗ್ರಾಹಕರಿಗೆ 50 ರೂಪಾಯಿಗಳಿಗೆ ಸೀರೆ ನೀಡುವ ಘೋಷಣೆಯನ್ನು ಮಾಡಲಾಗಿತ್ತು.
ವಿಚಿತ್ರ, ವ್ಯಂಗ್ಯವೆಂದರೆ ಕುತುವಿಲಕ್ಕು ಬೆಳಗುವ ಮೂಲಕ ಅಂಗಡಿಯನ್ನು ಉದ್ಘಾಟಿಸಿದ್ದೇ ಹೆಚ್ಚುವರಿ ಎಸ್ ಪಿ (ಮಹಿಳೆಯರ ವಿರುದ್ಧ ದೌರ್ಜನ್ಯ ಅಪರಾಧ ವಿಭಾಗ) ರಾಜೇಂದ್ರನ್, ತೆಂಕಸಿ ಶಾಸಕ ಪಳನಿ ನಾಡರ್, ತಮಿಳುನಾಡು ವಾಣಿಗರ್ ಸಂಘಂಕಳೈನ್ ಪೆರಮೈಪ್ಪುವಿನ ಅಧ್ಯಕ್ಷ ವಿಕ್ರಮರಾಜ. ಮಳಿಗೆ ಉದ್ಘಾಟನೆಗೂ ಮುನ್ನ ತಿರುನಲ್ವೇಲಿ-ತೆಂಕಾಸಿ ಹೆದ್ದಾರಿಯಲ್ಲಿ 50 ರೂಪಾಯಿಗಳಿಗೆ ಸೀರೆ ಎಂಬ ಬೋರ್ಡ್ ನ್ನು ಹಾಕಲಾಗಿತ್ತು.
ಅಳಂಗುಳಂ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ 5000 ಮಂದಿ ಬೆಳಿಗ್ಗೆಯೇ ಮಳಿಗೆಯತ್ತ ಧಾವಿಸಿದ್ದರು. ಈ ಪೈಕಿ ಯಾರೂ ಮಾಸ್ಕ್ ಧರಿಸಿರಲಿಲ್ಲ, ಸಮಾಜಿಕ ಅಂತರ ಅಂದರೆ ಏನು ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಜನದಟ್ಟಣೆಯ ನಿರ್ವಹಣೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಆದ್ರೆ ಬಳಿಕ ಈ ಘಟನೆ ವರದಿಯಾಗುತ್ತಿದ್ದಂತೆಯೇ ಆರೋಗ್ಯ ಅಧಿಕಾರಿಗಳು ಮಳಿಗೆಯ ಮಾಲಿಕರಿಗೆ 10,000 ರೂಪಾಯಿಗಳ ದಂಡ ವಿಧಿಸಿದ್ದು ಮಾಲಿಕ, ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಈತನ 50 ರೂಪಾಯಿಯ ಸೀರೆ ವ್ಯಪಾರದಿಂದ ಈತನಿಗೆ ಕೊನೆಗೆ ಸಿಕ್ಕಿದ್ದು 10 ಸಾವಿರದ ದಂಡ.