14 ನೆಯ ವಯಸ್ಸಿಗೇ ಶುರುಹಚ್ಚಿಕೊಂಡ ಆಕೆ ಈತನಕ ಉದುರಿಸಿದ್ದು ಒಂದು ಡಜನ್ ಮಕ್ಕಳು | 36 ರ ಈ ಬರ್ತ್ ಮಶೀನ್ ನ ಶಾರ್ಟ್ ಟರ್ಮ್ ಟಾರ್ಗೆಟ್ 17 !

ಆಕೆ 14 ವರ್ಷಕ್ಕೆ ಶುರುಮಾಡಿದ ಪ್ರೊಜೆಕ್ಟ್ ಇವತ್ತಿಗೂ ನಿಂತಿಲ್ಲ. ಈಗ ಆಕೆಗೆ 36 ವರ್ಷ ವಯಸ್ಸು. ಆಕೆಯ ದೊಡ್ಡ ಮಗನಿಗೆ ಈಗ ಭರ್ತಿ 16.

ಅವಳು ವೆರೋನಿಕಾ ಮೆರಿಟ್. ಮಗು ಮಾಡುವುದರಲ್ಲಿ ಅವಳು ಮೆರಿಟ್ ಸ್ಟೂಡೆಂಟ್. ಮೊದಲ ಗಂಡನಿಂದ 2 ಮಕ್ಕಳನ್ನು ಹೆತ್ತಳು. ಆ ನಂತರ ದಂಪತಿ ದೂರ ಆಗಿದ್ದರು. ಅದಾಗಲೇ ಮತ್ತೊಬ್ಬ ಗೆಳೆಯ ಆಕೆಗೆ ಸಿಕ್ಕಿದ್ದ. ಅವಳ ಮನಸ್ಸತ್ವ ಉಳ್ಳವಂತವನೆ. ಜೊತೆಗೆ ಸೇರಿಕೊಂಡು 1, 2, 3 ಅಂತ ಒಂದೊಂದಾಗಿ ಮಗು ಉದುರಿಸುತ್ತಾ ಹೋಗಿ, ಈಗ ಆ ಕಡೆಯಿಂದ ಲೆಕ್ಕ ಹಾಕಿದರೆ ಒಟ್ಟು 12 ಲೆಕ್ಕಕ್ಕೆ ಸಿಕ್ಕಿದೆ. ಬಹುಶಃ ಲೆಕ್ಕ ತಪ್ಪಿರಲಿಲ್ಲ ಅಂತ ನಂಬೋಣ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇದರ ಮಧ್ಯೆ ಆಕೆಗೆ ಟಿಕ್ ಟಾಕ್ ಮಾಡಲು ಎಲ್ಲಿ ಟೈಮ್ ಸಿಗುತ್ತೋ ಗೊತ್ತಿಲ್ಲ. ಆದರೂ ಆಕೆ ಟಿಕ್ ಟಾಕ್ ಮಾಡುತ್ತಿದ್ದಾಳೆ. ಟಿಕ್ ಟಾಕ್ ಸ್ಟಾರ್ ಬೇರೆ. ಅವಳಿಗೆ 95000 ಫಾಲೋವರ್ಸ್ ಬೇರೆ ಇದ್ದಾರೆ.

ನ್ಯೂಯಾರ್ಕ್ ಮೂಲದ ವೆರೋನಿಕಾ ಮೆರಿಟ್ ಗೆ ಮತ್ತಷ್ಟು ಮಕ್ಕಳು ಬೇಕಂತೆ. 17 ಆಕೆಯ ಲಕ್ಕಿ ನಂಬರ್ ಅಂತೆ. 12 ಪ್ಲಸ್ 5 ಮತ್ತೆ ಮಾಡೋ ಹುನ್ನಾರದಲ್ಲಿ ಆಕೆ ಇದ್ದಾಳಂತೆ.

‘ನಾನು ಏನು ಮಾಡಬೇಕೆಂದು ನೀವು ಹೇಳಬೇಡಿ ‘ ಎಂದು ಆಕೆ ಸೋಷಿಯಲ್ ಮೀಡಿಯಾದಲ್ಲಿ ತನ್ನ ಫಾಲವರ್ಸ್ ಗೆ ಟಾಂಟ್ ಬೇರೆ ಕೊಟ್ಟಿದ್ದಾಳೆ. ‘ಯಾರ ಮಾತು ಕೂಡ ನೀನು ಕೇಳಲ್ಲ ಎಂದು ನಮಗೆ ಮೊದಲೇ ಗೊತ್ತು, ಕೇಳಿದ್ದರೆ ಇಷ್ಟೆಲ್ಲಾ ಸ್ಫೋಟ ಆಗುತ್ತಿತ್ತಾ?! ‘ ಎಂದು ಜನ ಮರು ಪ್ರಶ್ನೆ ಹಾಕಲು ಮರೆತಿಲ್ಲ.

ಇದೀಗ ದಂಪತಿ ಬ್ಯುಸಿ. ತಮ್ಮ ಮನೆಗೆ ಮತ್ತೊಂದು ಹೊಸ ಅತಿಥಿ ಆಗಮನವಾಗುತ್ತಿದ್ದು, ಬರಲಿರುವ ಕೂಸಿಗೆ ಹೊಸ ಕುಲಾವಿ ಹೊಲಿಸುವ ಚಿಂತೆಯಲ್ಲಿದ್ದಾರೆ ಅವರು. ಅಂತೂ ಇಂತೂ 12 ಮಕ್ಕಳು ಪಡೆದಿರುವ ಈ ದಂಪತಿಗೆ ಮುಂದಿನ ಮಗುವಿನ ನೀಲನಕ್ಷೆ ತಯಾರಾಗುತ್ತಿದೆ. ಹಾಗಿದ್ದೂ ಇದು ಇಲ್ಲಿಗೆ ನಿಲ್ಲುವ ಪಯಣವಲ್ಲವಲ್ಲ, ಇನ್ನೂ 17ಕ್ಕೆ 4 ಮೆಟ್ಟಿಲು ಹಿಂದೆ ಇದ್ದಾರಲ್ಲ.

error: Content is protected !!
Scroll to Top
%d bloggers like this: