ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಂದೆಯೇ ಪೈಲೆಟ್ | ತಂದೆಯನ್ನು ಸಮವಸ್ತ್ರದಲ್ಲಿ ಕಂಡ ಈ ಪೋರಿಯ ಖುಷಿಗೆ ಪಾರವೇ ಇಲ್ಲ!! | ಇಲ್ಲಿದೆ ನೋಡಿ ಆ ಮುದ್ದಾದ ವಿಡಿಯೋ

ತಂದೆ ಮಗಳ ಸಂಬಂಧ ಏನೋ ಒಂಥರಾ ಒಂಥರಾ ಚಂದ. ಕರಗದಷ್ಟು ಪ್ರೀತಿ ಎನ್ನುವ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋನೇ. ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ, ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ ಅಪ್ಪ…ಹೆಣ್ಣು ಮಕ್ಕಳು ತಾಯಿಗಿಂತ, ತಂದೆಯನ್ನು ಹಚ್ಕೊಳ್ಳೋದೇ ಜಾಸ್ತಿ. ಸಣ್ಣ ಹೆಣ್ಣು ಮಕ್ಕಳಿಗಂತೂ ತಂದೆಯೇ ಪ್ರಪಂಚವಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ.

 

ವಿಮಾನದಲ್ಲಿದ್ದ ಪುಟ್ಟ ಹುಡುಗಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ, ಪುಟ್ಟ ಹುಡುಗಿ ದೆಹಲಿಯಿಂದ ವಿಮಾನ ಹತ್ತಿದ್ದಾಳೆ. ಹೀಗಿರುವಾಗ ಇದ್ದಕ್ಕಿದ್ದಂತೆ ಹುಡುಗಿ ತನ್ನ ತಂದೆ ಸಮವಸ್ತ್ರದಲ್ಲಿ ವಿಮಾನದಲ್ಲಿರುವುದನ್ನು ನೋಡಿದ್ದಾಳೆ. ಹುಡುಗಿಯ ತಂದೆ ವಿಮಾನದ ಪೈಲಟ್ ಆಗಿದ್ದು, ಇದನ್ನು ಕಂಡ ಹುಡುಗಿ ಬಹಳಷ್ಟು ಅಚ್ಚರಿ ವ್ಯಕ್ತಪಡಿಸಿದ್ದಾಳೆ. ಸದ್ಯ ಈ ಪುಟ್ಟ ಹುಡುಗಿಯ ಮುದ್ದಾದ ರಿಯಾಕ್ಷನ್ ನೆಟ್ಟಿಗರ ಮನ ಗೆದ್ದಿದೆ.

ಕಾಕ್‌ಪಿಟ್‌ ದ್ವಾರದ ಬಳಿ ಇದ್ದ ಅಪ್ಪ

ವೈರಲ್ ಆಗಿರುವ ವಿಡಿಯೋದಲ್ಲಿ, ಹುಡುಗಿಯ ತಂದೆ ಕಾಕ್ ಪಿಟ್ ಬಾಗಿಲ ಬಳಿ ನಿಂತಿದ್ದಾರೆ. ಈ ನಡುವೆ ಪೈಲಟ್, ತಂದೆ ತನ್ನ ಮಗಳ ಕಡೆ ಕೈ ಬೀಸಿದ್ದಾರೆ. ಈ ಸಮಯದಲ್ಲಿ, ಇನ್ನಿತರ ಪ್ರಯಾಣಿಕರು ಕೂಡ ವಿಮಾನ ಹತ್ತಿದ್ದು, ಹುಡುಗಿ ತನ್ನ ತಂದೆಯನ್ನು ನೋಡಿ ಆಶ್ಚರ್ಯಗೊಂಡ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಹುಡುಗಿಯ ಹೆಸರು ಶನಯಾ ಮೋತಿಹಾರ್ ಎಂದು ತಿಳಿದು ಬಂದಿದೆ. ಇನ್ನು ತಂದೆಯನ್ನು ಕಂಡ ಪುಟ್ಟ ಬಾಲಕಿ ಒಂದೇ ಸಮನೆ ಅಪ್ಪಾ ಎಂದು ಕರೆಯುತ್ತಿರುವುದನ್ನು ನೊಡಬಹುದಾಗಿದೆ.

ಎರಡು ಲಕ್ಷಕ್ಕೂ ಅಧಿಕ ಮಂದಿಯಿಂದ ಲೈಕ್ಸ್

ಈ ವಿಡಿಯೋವನ್ನು ಶನಾಯ ಮೋತಿಹಾರ್ ಅವರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋದ ಶೀರ್ಷಿಕೆಯಲ್ಲಿ ‘ಅಪ್ಪನ ಜೊತೆ ನನ್ನ ಮೊದಲ ವಿಮಾನಯಾನ. ಅವರು ನನ್ನನ್ನು ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಅವನನ್ನು ನೋಡಲು ತುಂಬಾ ಉತ್ಸುಕಳಾಗಿದ್ದೆ. ಇದು ನಾನು ಕಂಡ ಅತ್ಯುತ್ತಮ ವಿಮಾನಯಾನ. ಲವ್ ಯು ಪಾಪಾ” ಎಂದು ಬರೆಯಲಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

Leave A Reply

Your email address will not be published.