ಹಲವು ಗಂಟೆಗಳ ಕಾಲ ಸಾರ್ವಜನಿಕರನ್ನು ಮತ್ತು ಪೊಲೀಸರನ್ನು ಕಾಡಿದ ಕಲರ್ ಫುಲ್ ಸೀರೆಗಳು !

ಬೆಂಗಳೂರು: ನೀರೆ ಬಣ್ಣಬಣ್ಣದ ಸೀರೆಯುಟ್ಟು ನೋಡುಗರನ್ನು ಕಾಡುವುದು ಸಹಜ. ಆದರೆ ಕಲರ್ ಕಲರ್ ಸೀರೆಗಳೆ ಇಲ್ಲಿ ಸಾರ್ವಜನಿಕರನ್ನು ಸೇರಿ, ಪೊಲೀಸರನ್ನು ಗಂಟೆಗಟ್ಟಲೆ ಕಾಡಿದೆ. ಆತಂಕ ಸೃಷ್ಟಿಸಿದೆ.

ನಿನ್ನೆ ಬೆಂಗಳೂರಿನ ಜನನಿಬಿಡ ವ್ಯಾಪಾರದಿಂದ ಸದಾ ತುಂಬಿ ತುಳುಕುವ ಚಿಕ್ಕಪೇಟೆ ಮಾರುಕಟ್ಟೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸೂಟ್‍ಕೇಸ್ ಒಂದು ಪತ್ತೆಯಾಗಿತ್ತು. ಆ ಅನಾಮಿಕ ಸ್ಕೂಟರಿನ ಒಳಗೆ ಬಾಂಬ್ ಇರಬಹುದಾದ ಆತಂಕ ಸೃಷ್ಟಿಸಿತ್ತು. ಬಳಿಕ ಮೂರು ತಾಸುಗಳ ಕಾರ್ಯಚರಣೆ ಬಳಿಕ ಅದನ್ನು ತೆರೆದು ನೋಡಿದಾಗ ಅದರೊಳಗೆ ಪತ್ತೆಯಾಗಿದ್ದು ಕಲರ್, ಕಲರ್ ಸೀರೆಗಳು !


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಚಿಕ್ಕಪೇಟೆ ಮಾರುಕಟ್ಟೆಯ ಬಿಕೆ ಐಯ್ಯಂಗಾರ್ ಬೇಕರಿಯ ಅಭಿನಯ ಟಾಕೀಸ್ ಮುಂಭಾಗದ ರಸ್ತೆಯಲ್ಲಿ ಅನುಮಾಸ್ಪದ ರೀತಿಯಲ್ಲಿ ಎರಡು ಸೂಟ್ ಕೇಸ್ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಬಳಿಕ ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಕರೆಸಿದ ಪೊಲೀಸ್ ಇಲಾಖೆ ಮೂರು ಗಂಟೆಗಳ ಕಾರ್ಯಚರಣೆ ನಡೆಸಿ ಸೂಟ್‍ಕೇಸ್ ತೆರೆದಾಗ ಅದರಲ್ಲಿ ಬರೀ ಸೀರೆಗಳು ಪತ್ತೆಯಾಗಿದೆ.

ಸೂಟ್‍ಕೇಸ್ ಪತ್ತೆಯಾದ ಪ್ರದೇಶದಲ್ಲಿ ಬರೊಬ್ಬರಿ 3 ಸಾವಿರ ಮಳಿಗೆಗಳು ಇದ್ದು, ಆ ಪ್ರದೇಶದಲ್ಲಿ ಎಲೆಕ್ಟ್ರಿಕ್, ಗ್ಲಾಸ್, ಹೋಲ್‍ಸೆಲ್ ಬಟ್ಟೆ, ಆಟದ ಸಾಮಾಗ್ರಿ ಮಳಿಗೆ, ವೈರಿಂಗ್ ಮಳಿಗೆಗಳು ಹೀಗೆ ನಾನಾ ಬಗೆಯ ಹೋಲ್‍ಸೆಲ್ ಶಾಪ್‍ಗಳು ಇವೆ. ಹಾಗಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಸೂಟ್‍ಕೇಸ್‍ನಲ್ಲಿ ಬಾಂಬ್ ಆತಂಕದ ಮಧ್ಯೆ ತೆರೆದು ನೋಡಿದಾಗ ಕಲರ್, ಕಲರ್ ಸೀರೆ ಪತ್ತೆಯಾಗಿದೆ. ಈ ಮೂಲಕ ಜನರಲ್ಲಿ ಆತಂಕ ಮೂಡಿಸಿದ್ದ ಸೂಟ್‍ಕೇಸ್ ಕಂಡು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆತಂಕ ಸೃಷ್ಟಿಸಿದ ಸೂಟ್ ಕೇಸ್ ಕೊನೆಗೆ ಆಕರ್ಷಣೆ ಮೂಡಿಸಿದೆ.

error: Content is protected !!
Scroll to Top
%d bloggers like this: