ಅಪ್ರಾಪ್ತ ಹುಡುಗ-ಹುಡುಗಿಗೆ ಆನ್ಲೈನ್ ಲೂಡೋ ಆಟದಿಂದ ಚಿಗುರೊಡೆಯಿತು ಪ್ರೀತಿ !! | ತನ್ನ ಪ್ರೀತಿ ಅರಸುತ್ತಾ ಮನೆಬಿಟ್ಟು ಓಡಿಹೋದ ಬಾಲಕಿ | ಮುಂದೇನಾಯಿತು ?? ಇಲ್ಲಿದೆ ಈ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

ಪ್ರೀತಿ ಎಲ್ಲಿ, ಯಾವಾಗ, ಯಾವ ರೀತಿಯಲ್ಲಿ ಆರಂಭವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವರಿಗಂತೂ ವಿಚಿತ್ರ ಸಂದರ್ಭಗಳಲ್ಲಿ ಪ್ರೀತಿ ಶುರುವಾಗಿದ್ದುಂಟು. ಹಾಗೆಯೇ ಇತ್ತೀಚೆಗೆ ವರದಿಯಾಗಿರುವ ಈ ವಿಚಿತ್ರ ಪ್ರೀತಿ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.

ಆನ್‌ಲೈನ್‌ನಲ್ಲಿ ಲೂಡೋ ಆಡುತ್ತಿದ್ದ ಬಾಲಕ ಬಾಲಕಿಯರ ನಡುವೆ ಪ್ರೀತಿ ಚಿಗುರೊಡೆದು ಮದುವೆಯಾಗುವ ನಿರ್ಧಾರಕ್ಕೆ ಬಂದು ಓಡಿಹೋಗಿರುವ ಘಟನೆ ನಡೆದಿದೆ. ಒಡಿಶಾದ ಬಾಲಕಿ ಹಾಗೂ ಹರಿಯಾಣದ ಬಾಲಕನ ನಡುವೆ ಹುಟ್ಟಿರುವ ಪ್ರೀತಿ ಇದು!!

ಇವರ ಲೂಡೋ ಆಟದಿಂದ ಲವ್ ಎಷ್ಟರಮಟ್ಟಿಗೆ ಆಯಿತೆಂದರೆ ಹುಡುಗಿ ಹುಡುಗನನ್ನು ವಿಪರೀತವಾಗಿ ಪ್ರೀತಿಸಲು ಶುರು ಮಾಡಿ, ನಂತರ ಮನೆಯಲ್ಲಿ ಯಾರಿಗೂ ತಿಳಿಸದೇ ಹುಡುಗ ಇದ್ದಲ್ಲಿಗೆ ಹೋಗಿದ್ದಾಳೆ. ಇಬ್ಬರೂ ಮದುವೆಯ ಪ್ಲಾನ್ ಬೇರೆ ಹಾಕಿಕೊಂಡಿದ್ದರು. ಆದ್ದರಿಂದ ಪಾಣಿಪತ್‌ನ ದೇವಾಲಯದಲ್ಲಿ ಮದುವೆಯಾಗುವ ನಿರ್ಧಾರಕ್ಕೆ ಬಂದರು.

Ad Widget
Ad Widget

Ad Widget

Ad Widget

ಬಾಲಕಿ 9ನೇ ಕ್ಲಾಸಿನಲ್ಲಿ ಓದುತ್ತಿದ್ದರೆ ಬಾಲಕ ಶಾಲೆಗೆ ಹೋಗುತ್ತಿರಲಿಲ್ಲ. ಪಾಣಿಪತ್‌ನ ಸೋನಾಲಿ ರಸ್ತೆಯ ಕೊಳಚೆ ಪ್ರದೇಶದಲ್ಲಿ ಈತ ವಾಸಿಸುತ್ತಿದ್ದ. ತಮ್ಮ ಮಗಳು ಲವ್‌ನಲ್ಲಿ ಬಿದ್ದಿರೋ ಸುದ್ದಿ ಬಾಲಕಿಯ ತಾಯಿಗೆ ತಿಳಿದಿತ್ತು. ಆದ್ದರಿಂದ ಅವರು ಮನೆಯಲ್ಲಿ ತುಂಬಾ ಸ್ಟ್ರಿಕ್ಟ್ ಮಾಡತೊಡಗಿದರು. ಒಂದು ದಿನ ಅಕ್ಕನ ಮನೆಗೆ ಹೋಗಿಬರುವುದಾಗಿ ಹೇಳಿದ ಬಾಲಕಿ ಅಲ್ಲಿಂದ ಓಡಿಹೋಗಿದ್ದಳು.

ಈ ಮದುವೆಯ ಸುದ್ದಿ ಅಲ್ಲಿನ ಅಧಿಕಾರಿಗೆ ಸಿಕ್ಕಿತು. ಬಾಲಕನ ಮನೆಯವರು ಮದುವೆಗೆ ಸಿದ್ಧತೆಗೊಳಿಸಿದ್ದರು. ನಂತರ ಅಲ್ಲಿ ದಾಳಿ ಮಾಡಿದ ಅಧಿಕಾರಿಗಳು ಮದುವೆಯನ್ನು ನಿಲ್ಲಿಸಲು ಬಂದಾಗ ಬಾಲಕನ ಮನೆಯವರು ಪ್ರತಿರೋಧ ಒಡ್ಡಿದರು. ಇಬ್ಬರೂ ಪ್ರಾಪ್ತರು ಎಂದರು. ಆದರೆ ಆ ಬಗ್ಗೆ ಅವರಲ್ಲಿ ದಾಖಲೆ ಇರಲಿಲ್ಲ. ಆದ್ದರಿಂದ ಮದುವೆಯನ್ನು ನಿಲ್ಲಿಸಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ.

‘ಎರಡು ವರ್ಷಗಳಿಂದ ಇವರ ನಡುವೆ ಲವ್ ಶುರುವಾಗಿ ಲೂಡೋ ಆಟದಿಂದ ಇಲ್ಲಿಯವರೆಗೆ ವಿಷಯ ಬಂದು ಮುಟ್ಟಿದೆ. ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಪಾಲಕರು ಸ್ವಲ್ಪ ಗಮನ ಹರಿಸುತ್ತಿರಬೇಕು. ಇಲ್ಲದಿದ್ದರೆ ಮಕ್ಕಳ, ಅದರಲ್ಲಿಯೂ ಹೆಣ್ಣುಮಕ್ಕಳ ಭವಿಷ್ಯ ಏನಾದರೂ ಆಗಬಹುದು, ಈಗ ಎಂತೆಂಥ ನೀಚ ಕೃತ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅಮಾಯಕ ಹೆಣ್ಣುಮಕ್ಕಳ ಮನಸ್ಸನ್ನು ಕೆಡಿಸಿ ಅವರನ್ನು ಬೇಡದ ಕೃತ್ಯಕ್ಕೂ ನೂಕಲಾಗುತ್ತದೆ. ಆದ್ದರಿಂದ ಪಾಲಕರು ಅತೀ ಎಚ್ಚರದಿಂದ ಇರಬೇಕು’ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: