ಕಡಬ: ಗ್ಯಾರೇಜ್ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

ಕಡಬ: ದ.ಕ, ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಇದರ ಕಡಬ ವಲಯದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಗೌರವಾಧ್ಯಕ್ಷರಾಗಿ ಸುಂದರ ಗೌಡ ಮಂಡೆಕರ, ಅಧ್ಯಕ್ಷರಾಗಿ ಅಶೋಕ್ ಕುಮಾರ್ ಕಡಬ, ಕಾರ್ಯದರ್ಶಿಯಾಗಿ ರಾಜ್ ಪ್ರಕಾಶ್ ಕುಂತೂರು, ಕೋಶಾಧಿಕಾರಿಯಾಗಿ ದೇವಣ್ಣ ಕಡಬ ನೇಮಕಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ನಿತ್ಯಾನಂದ ಕಡಬ, ಬಾಲಕೃಷ್ಣ ಪನ್ಯಾಡಿ, ಜತೆ ಕಾರ್ಯದರ್ಶಿಯಾಗಿ ಪ್ರವೀಣ್, ಚಂದ್ರಶೇಖರ್ ಕಡಬ, ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ದಾಸ್ ಕಡಬ, ಕ್ರೀಡಾ ಕಾರ್ಯದರ್ಶಿಯಾಗಿ ಹರ್ಷಾ ಕಡಬ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಮಚಂದ್ರ ಮರ್ದಾಳ ಆಯ್ಕೆಯಾಗಿದ್ದು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರೀಶ್ಚಂದ್ರ ಇಚ್ಲಂಪಾಡಿ, ರಾಧಾಕೃಷ್ಣ, ದಿನೇಶ್ ಆಚಾರ್ಯ, ತುಳಸೀಧರನ್, ಸಂತೋಷ್ ಕಡಬ, ಕಿರಣ್ ಕೋಡಿಂಬಾಳ, ಸಾಧಿಕ್ ವಿಟ್ಲ, ಪ್ರವೀಣ್ ಹೆಗ್ಡೆ ಕಡಬ ನೇಮಕಗೊಂಡಿದ್ದಾರೆ.

ಆಯ್ಕೆ ಪ್ರಕ್ರಿಯೇ ಸಭೆ
ಆಯ್ಕೆ ಪ್ರಕ್ರಿಯೇಯು ಅ.3ರಂದು ಕಡಬ ಸಂಕೀರ್ಣದಲ್ಲಿ ನಡೆಯಿತು. ಕಡಬ ಗಣೇಶ್ ಇಂಡಸ್ಟ್ರೀಸ್ ಮತ್ತು ಲೇತ್ ವರ್ಕ್ಸ್‌ನ ಮಾಲಕ ಸುಂದರ ಗೌಡ ಮಂಡೆಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ.ಕ, ಉಡುಪಿ ಉಭಯ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಚೇರ್‌ಮೆನ್ ಜನಾರ್ಧನ ಎ, ದ.ಕ ಉಡುಪಿ ಉಭಯ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ದಿನೇಶ್ ಕುಮರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ನಿರ್ದೆಶಕ ದಿವಾಕರ, ಕೋಶಾಧಿಕಾರಿ ರಾಜ್‌ಗೋಪಾಲ್ ಉಪಸ್ಥಿತರಿದ್ದರು. ಜಿಲ್ಲಾ ಸಂಘದ ನಿರ್ದೆಶಕ ಪುಂಡಲೀಕ ಸುವರ್ಣ ಪ್ರಸ್ತಾವನೆಗೈದರು. ಕಡಬ ವಲಯ ಕಾರ್ಯದರ್ಶಿ ಪ್ರವೀಣ್ ಸ್ವಾಗತಿಸಿದರು. ಸಂಘದ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಮಿಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave A Reply