ಹಿರಿಯ ಅಧಿಕಾರಿ ಮನೆಗೆ ನುಗ್ಗಿದ ಕಳ್ಳರು | ಮನೆಯಲ್ಲಿ ಕದಿಯಲು ಏನೂ ಇಲ್ಲದ್ದನ್ನು ಕಂಡು “ಏನು ಇಲ್ಲ ಅಂದಮೇಲೆ ಬೀಗ ಏಕೆ ??” ಎಂದು ಪತ್ರ ಬರೆದಿಟ್ಟರು !! | ಇಲ್ಲಿದೆ ನೋಡಿ ಈ ಖತರ್ನಾಕ್ ಕಳ್ಳರ ಸ್ಟೋರಿ

ಭೋಪಾಲ್: ಕಳ್ಳರು ಕೂಡ ಎಷ್ಟು ಚಾಣುಕ್ಯರು ಎಂಬುದು ಡೌಟ್ ಯೇ ಇಲ್ಲ ಬಿಡಿ.ಅದೆಂತಹ ಕಳ್ಳರು ಕೂಡ ಇದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ಹಿರಿಯ ಅಧಿಕಾರಿಯ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿ ಏನೂ ಸಿಗದೇ ಹಿನ್ನಲೆ ಅಧಿಕಾರಿಗೆ ಒಂದು ಬಿಟ್ಟಿ ಸಲಹೆಯನ್ನು ಬರೆದು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಂದಹಾಗೆ,ಈ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದದ್ದು ದೆವಾಸ್ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತ್ರಿಲೋಚನ್ ಗೌರ್ ನಿವಾಸ.ಮನೆಯ ಬೀಗ ಒಡೆದು ನುಗ್ಗಿದ ಕಳ್ಳರು ಮನೆಯನ್ನು ಜಾಲಾಡಿದ್ದಲ್ಲದೇ ಹೊರಡುವ ಮುನ್ನ “ಕಲೆಕ್ಟರ್, ಮನೆಯಲ್ಲಿ ಏನೂ ಇಲ್ಲ ಎಂದಾದ ಮೇಲೆ ಮನೆಗೆ ನೀವು ಬೀಗ ಹಾಕಬಾರದು” ಎಂಬ ನೋಟಿಸ್ ಹಚ್ಚಿ ಹೋಗಿದ್ದಾರೆ.

ದೆವಾಸ್‌ನ ಖತೇಗಾಂವ್ ತಾಲೂಕಿನಲ್ಲಿ ಉಪವಿಭಾಗ ಮ್ಯಾಜಿಸ್ಟ್ರೇಟ್ ಆಗಿರುವ ಗೌರ್ ಕಳೆದ 15-20 ದಿನಗಳಿಂದ ಮನೆಯಲ್ಲಿ ಇರಲಿಲ್ಲ. ಮನೆಗೆ ವಾಪಸಾದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ನಗದು ಮತ್ತು ಬೆಳ್ಳಿ ಆಭರಣಗಳು ನಾಪತ್ತೆಯಾಗಿದ್ದವು. ಆ ಬಳಿಕ ಅಧಿಕಾರಿ ಘಟನೆ ಬಗ್ಗೆ ದೂರು ನೀಡಿದರು.

30 ಸಾವಿರ ರೂ. ನಗದು ಮತ್ತು ಕೆಲ ಆಭರಣ, ತ್ರಿಲೋಚನ್ ಗೌರ್ ಅವರ ಸರ್ಕಾರಿ ನಿವಾಸದಿಂದ ಕಳ್ಳತನವಾಗಿದೆ. ಘಟನೆ ಯಾವಾಗ ನಡೆದಿದೆ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಇನ್‌ಸ್ಪೆಕ್ಟರ್ ಉಮ್ರವ್ ಸಿಂಗ್ ಹೇಳಿದ್ದಾರೆ.

ಬೆಳ್ತಂಗಡಿ| ಅಕ್ರಮ ಮರಳುಗಾರಿಕೆ ವ್ಯಾಪಕ | ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆ

Leave A Reply

Your email address will not be published.