ಮಂಗಳೂರು | ವಿವಾಹಿತ ಮಹಿಳೆ ನಾಪತ್ತೆ, ದೂರು ದಾಖಲು

Share the Article

ಮಂಗಳೂರಿನ ಅಪಾರ್ಟೆಂಟ್ ಒಂದರಲ್ಲಿ ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವಳು ನಾಪತ್ತೆಯಾದ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಲೆನ್ಸಿಯ ನಿವಾಸಿ ವಿಜಯಲಕ್ಷ್ಮಿ (26) ನಾಪತ್ತೆಯಾದ ಯುವತಿ. ಇವರು ಎಂಟು ವರ್ಷಗಳಿಂದ ಪತಿ ನಾಗೇಶ್, ಇಬ್ಬರು ಮಕ್ಕಳೊಂದಿಗೆ ನಗರದ ವೆಲೆನ್ಸಿಯಾದ ಸುವರ್ಣ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದಾರೆ. ಪತಿ ನಾಗೇಶ್ ಅವರು ರವಿ ಎಂಬವರಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಇತ್ತ ಪತ್ನಿ ವಿಜಯಲಕ್ಷ್ಮಿ ತಾವು ವಾಸವಾಗಿದ್ದ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಚ್‌ಮೆನ್‌ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪ್ರತಿನಿತ್ಯದಂತೆ ನಾಗೇಶ್ ಚಾಲಕ ವೃತ್ತಿಗೆ ತೆರಳಿದ್ದು, ಮಧ್ಯಾಹ್ನ 12:30ರ ಸುಮಾರಿಗೆ ನಾಗೇಶ್ ವಾಸವಿದ್ದ ಅಪಾರ್ಟ್ ಮೆಂಟ್‌ನಿಂದ ಫೋನ್ ಕರೆ ಬರುತ್ತದೆ. ಪತ್ನಿ ಮನೆಯಲ್ಲಿ ಇಲ್ಲ. ಜನರೇಟರ್ ಆನ್ ಮಾಡಲೆಂದು ತಿಳಿಸಿದ್ದರು.

ಇರುವ ಕೆಲಸ ಬಿಟ್ಟು ಅಪಾರ್ಟ್‌ಮೆಂಟ್‌ಗೆ ತೆರಳಿದ ನಾಗೇಶ್ ಮನೆಯಲ್ಲಿ ಹುಡುಕಾಡಿದರೂ ಪತ್ನಿ ಇರಲಿಲ್ಲ ಹಾಗೂ ಫೋನ್‌ಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಎಂದು ಬಂದಿದೆ. ಮಕ್ಕಳು ಇಬ್ಬರನ್ನೂ ಬಿಟ್ಟು ಕಾಣೆಯಾಗಿರುವುದು ಕಂಡುಬಂದಿದೆ. ಸಂಬಂಧಿಕರು, ನೆರೆಹೊರೆಯವರಲ್ಲಿ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪತ್ನಿಯನ್ನು ಹುಡುಕಿ ಕೊಡಿ ಎಂದು ಗಂಡ ನಾಗೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸುಳ್ಯ : ಮೂರೂರು ಬಳಿ ಲಾರಿ-ಓಮ್ನಿ ಡಿಕ್ಕಿ ,ನಾಲ್ವರಿಗೆ ಗಾಯ

Leave A Reply