ಆನ್ಲೈನ್ ಶೇರು ವ್ಯವಹಾರಕ್ಕೆ ಹಲವರಿಂದ ಹಣ ಸಂಗ್ರಹಿಸಿ ವಂಚನೆ : ಬೆಳ್ತಂಗಡಿಯ ಯುವಕನ ಬಂಧನ

Share the Article

ಆನ್ ಲೈನ್ ಶೇರು ವ್ಯವಹಾರಕ್ಕೆಂದು ನಾನಾ ಜನರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ವ್ಯಕ್ತಿ ಪೊಲೀಸರ ಬಲೆ ಬಿದ್ದಿದ್ದಾನೆ.

ಬೆಳ್ತಂಗಡಿ ಮೂಲದ ಹರ್ಮನ್ ಜಾಯ್ಸನ್ ಲೋಬೊ ಈ ಪ್ರಕರಣದಲ್ಲಿ ಬಂಧಿತ ಆರೋಪಿ.

ಜಾಯ್ಸನ್ ಲೋಬೋ ಆನ್ ಲೈನ್ ಶೇರು ವ್ಯವಹಾರಕ್ಕೆಂದು 59 ಲ.ರೂ ಗಳಿಗಿಂತಲೂ ಹೆಚ್ಚು ಹಣ ಸಂಗ್ರಹಿಸಿ ವಂಚಿಸಿದ್ದ.. ಸುಮಾರು 30ಮಂದಿಗೆ ವಂಚಿಸಿರುವ ಮಾಹಿತಿ ಇದೆ ಎಂದು ಮಂಗಳೂರು ಪೊಲಿಸ್ ಅಯುಕ್ತರು ತಿಳಿಸಿದ್ದಾರೆ.

ಈತನ ವಿರುದ್ಧ ಬಂದರು ಠಾಣೆಯಲ್ಲಿ ದೂರು ದಾಖಲಾಗಿತ್ತು.

Leave A Reply