ಇಸ್ರೇಲ್​ನ ಜೆರುಸಲೇಂನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ!

ಮನೆ ಕಟ್ಟುವಾಗ ಹಾಲ್, ಬೆಡ್​ ರೂಂ, ಅಡುಗೆ ಮನೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೋ ಬಾತ್​ರೂಂಗೂ ಅಷ್ಟೇ ಆದ್ಯತೆ ನೀಡುವ ಕಾಲವಿದು.ಈಗ ಡಿಫ್ರೆಂಟ್ ಡಿಫ್ರೆಂಟ್ ಶೈಲಿಯ ಶೌಚಾಲಯಗಳು ಬಂದಿವೆ.ಆದ್ರೆ ಹಿಂದಿನ ಕಾಲದಲ್ಲಿ ಶೌಚಾಲಯ ಹೇಗಿತ್ತು ಅನ್ನೋ ಒಂದು ಸಣ್ಣ ಪ್ರಶ್ನೆ ಎಲ್ಲರನ್ನೂ ಕಾಡೇ ಇರುತ್ತೆ.ಅದಕ್ಕೆ ಇಸ್ರೇಲ್ ಪುರಾತತ್ವ ಇಲಾಖೆ ಅಧಿಕಾರಿಗಳು ಉತ್ತರ ಕಂಡು ಹಿಡಿದಿದ್ದಾರೆ.

ಐಷಾರಾಮಿಯಾಗಿ ಕಟ್ಟುವ ಬಾತ್ ರೂಂ ಕೂಡ ಪ್ರತಿಷ್ಠೆಯ ಸಂಕೇತ ಎಂದು ಭಾವಿಸುವವರಿದ್ದಾರೆ. ವಿಶಾಲವಾದ ಬಾತ್ ರೂಂನಲ್ಲಿ ಶವರ್, ಆಧುನಿಕವಾದ ಕಮೋಡ್, ಬಾತ್ ಟಬ್, ಸಿಂಕ್ ಮತ್ತಿತರ ಎಲ್ಲ ಸೌಲಭ್ಯಗಳೂ ಇರಬೇಕೆಂದು ಬಯಸುವವರಿದ್ದಾರೆ. ಆದರೆ, ಇಸ್ರೇಲ್​ನ ಜೆರುಸಲೇಂನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಒಂದು ಪತ್ತೆಯಾಗಿದೆ!

ಇಸ್ರೇಲ್​ನ ಪವಿತ್ರ ಸ್ಥಳವಾದ ಜೆರುಸಲೆಂನಲ್ಲಿ 2,700 ವರ್ಷಗಳ ಹಿಂದಿನ ಕಲ್ಲಿನ ಅಪರೂಪದ ಟಾಯ್ಲೆಟ್ ಪತ್ತೆಯಾಗಿದೆ. ಕುಳಿತುಕೊಳ್ಳಲು ಆರಾಮದಾಯಕವಾಗುವ ರೀತಿಯಲ್ಲಿ ಕಲ್ಲನ್ನು ವಿನ್ಯಾಸಗೊಳಿಸಲಾಗಿದೆ. ಇಸ್ರೇಲಿ ಪುರಾತನ ಪ್ರಾಧಿಕಾರೀತಿಯ ಶೌಚಾಲಯಗಳು ಸಿಕ್ಕಿವೆ. ಕೇವಲ ಶ್ರೀಮಂತರು ಮಾತ್ರವೇ ಈ ರೀತಿ ಖಾಸಗಿ ಶೌಚಾಲಯ ಮಾಡಿಸಿಕೊಳ್ತಿದ್ರು ಅಂತ ಹೇಳಿದ್ದಾರೆ.ನಯವಾದ, ಕೆತ್ತಿದ ಸುಣ್ಣದ ಕಲ್ಲಿಂದ ಮಾಡಲ್ಪಟ್ಟ ಈ ಶೌಚಾಲಯವು ಆಯತಾಕಾರದ ಕೋಣೆಯಲ್ಲಿ ಪತ್ತೆಯಾಗಿದೆ.

ಇದು ಆಗಿನ ಕಾಲದಲ್ಲೇ ಈ ನಗರದ ಸ್ನಾನಗೃಹವು ಎಷ್ಟು ಐಷಾರಾಮಿಯಾಗಿತ್ತು ಅನ್ನೋದನ್ನ ಬಿಂಬಿಸುತ್ತೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಇದ್ರ ಕೆಳಗೆ ತೋಡಲಾದ ಒಂದು ಗುಂಡಿ ಕೂಡ ಪತ್ತೆಯಾಗಿದ್ದು,ಸೆಪ್ಟಿಕ್ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿರೋ ಪುರಾತತ್ವ ಇಲಾಖೆ ತಜ್ಞರು, ಪ್ರಾಚೀನ ಕಾಲದಲ್ಲಿ ಈ ರೀತಿಯ ಖಾಸಗಿ ಶೌಚಾಲಯ ತುಂಬಾ ಕಡಿಮೆ ಇತ್ತು.

ಪುರಾತನ ಕಾಲದಲ್ಲಿ ಈ ರೀತಿಯ ಖಾಸಗಿ ಟಾಯ್ಲೆಟ್ ನಿರ್ಮಿಸಿಕೊಳ್ಳುವುದು ಬಹಳ ಅಪರೂಪವಾಗಿತ್ತು. ಆಗೆಲ್ಲ ಬಯಲು ಶೌಚಾಲಯ ಇರುತ್ತಿತ್ತು ಅಥವಾ ಸಾರ್ವಜನಿಕ ಶೌಚಾಲಯ ಇರುತ್ತಿತ್ತು.ಇತ್ತೀಚೆಗೆ ಅಟ್ಯಾಚ್ಡ್ ಬಾತ್ ರೂಂ ನಿರ್ಮಿಸುವ ಟ್ರೆಂಡ್ ಶುರುವಾಗಿದೆ. ಪ್ರಾಚೀನ ಕಾಲದಲ್ಲಿ ಕೆಲವೇ ಕೆಲವು ಟಾಯ್ಲೆಟ್​ಗಳು ಪತ್ತೆಯಾಗಿವೆ. ಆದರೆ, ಇಷ್ಟು ಪುರಾತನವಾದ ಟಾಯ್ಲೆಟ್ ಪತ್ತೆಯಾಗಿರಲಿಲ್ಲ.

ಶ್ರೀಮಂತರು ಮಾತ್ರ ಆಗ ಟಾಯ್ಲೆಟ್​ಗಳನ್ನು ಕಟ್ಟಿಸಿಕೊಳ್ಳುತ್ತಿದ್ದರು. ಈ ಟಾಯ್ಲೆಟ್ ಕಟ್ಟಿಸಿದವರು ಕೂಡ ಶ್ರೀಮಂತರಾಗಿರಬಹುದು. ಅಲ್ಲದೆ, ಈ ಶೌಚಾಲಯವನ್ನು ಬೆಡ್ ರೂಂ ಮತ್ತು ರೀಡಿಂಗ್ ಟೇಬಲ್ ಬಳಿಯಲ್ಲಿಯೇ ನಿರ್ಮಿಸಲಾಗಿತ್ತು. ಒಟ್ಟಾರೆ ಈ ಟಾಯ್ಲೆಟ್ ಈಗ ಭಾರೀ ಸುದ್ದಿಯಲ್ಲಿದೆ.

Leave A Reply

Your email address will not be published.